ಕುಡತಿನಿ ಪಟ್ಟಣ ಪಂಚಾಯಿತಿ: ದರಪಟ್ಟಿ ಆಹ್ವಾನ
ಕುಡತಿನಿ, 19 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಕುಡತಿನಿ ಪಟ್ಟಣ ಪಂಚಾಯಿತಿ ವತಿಯಿಂದ ಸೆ.23 ರಂದು ಹಮ್ಮಿಕೊಳ್ಳಲಾಗಿರುವ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ವಿವಿಧ ಸೇವೆ ಹಾಗೂ ಪರಿಕರಗಳ ಸರಬರಾಜಿಗಾಗಿ ಸ್ಥಳೀಯ ಏಜೆನ್ಸಿಗಳಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ. ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗು
ಕುಡತಿನಿ ಪಟ್ಟಣ ಪಂಚಾಯಿತಿ: ದರಪಟ್ಟಿ ಆಹ್ವಾನ


ಕುಡತಿನಿ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಕುಡತಿನಿ ಪಟ್ಟಣ ಪಂಚಾಯಿತಿ ವತಿಯಿಂದ ಸೆ.23 ರಂದು ಹಮ್ಮಿಕೊಳ್ಳಲಾಗಿರುವ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ವಿವಿಧ ಸೇವೆ ಹಾಗೂ ಪರಿಕರಗಳ ಸರಬರಾಜಿಗಾಗಿ ಸ್ಥಳೀಯ ಏಜೆನ್ಸಿಗಳಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ.

ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗುವ ಪೌರಕಾರ್ಮಿಕರ ಕ್ರೀಡಾಕೂಟಗಳಿಗೆ ಟೀ-ಶರ್ಟ್, ಸಮವಸ್ತç, ಕ್ರೀಡಾ ಪ್ರಶಸ್ತಿ ಟ್ರೋಫಿ ಹಾಗೂ ಸಮಾರಂಭದ ದಿನದ ಊಟ ಮತ್ತು ಉಪಹಾರ ಸರಬರಾಜು ಮಾಡಲು 2026-27ನೇ ಸಾಲಿನ ಪಟ್ಟಣ ಪಂಚಾಯಿತಿ ನಿಧಿಯಡಿ ಆಹ್ವಾನಿಸಲಾಗಿದೆ.

ಆಸಕ್ತ ಏಜೆನ್ಸಿಗಳು ಸೆ.21 ರಂದು ಮಧ್ಯಾಹ್ನ 1 ಗಂಟೆಯ ಒಳಗಾಗಿ ಕುಡತಿನಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ‘ಕೆ/ಕ್ಯೂ-1' ನಮೂನೆಯನ್ನು ಪಡೆದುಕೊಳ್ಳಬಹುದಾಗಿದೆ. ಭರ್ತಿ ಮಾಡಿದ ನಮೂನೆಗಳನ್ನು ಅದೇ ದಿನ ಸಂಜೆ 4 ಗಂಟೆಯೊಳಗೆ ಕಚೇರಿಗೆ ಸಲ್ಲಿಸುವಂತೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande