ಸೆ.4ರಿಂದ 5 ಫ್ಲೈಓವರ್ಗಳಲ್ಲಿ ಕೆಲ ವಾಹನಗಳಿಗೆ ನಿರ್ಬಂಧ
ಕೆಲ ವಾಹನಗಳಿಗೆ ನಿರ್ಬಂಧ
bengaluru-traffic-restrictions-on-vehicles-at-five-flyovers-from-september-4-to-11


ಬೆಂಗಳೂರು, 31 ಆಗಸ್ಟ್ (ಹಿ.ಸ.)

ಆ್ಯಂಕರ್:

ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸೆಪ್ಟೆಂಬರ್ 4ರಿಂದ 11ರವರೆಗೆ ಐದು ಪ್ರಮುಖ ಫ್ಲೈಓವರ್ಗಳಲ್ಲಿ ಕೆಲ ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.ಈ ನಿರ್ಬಂಧವು 24 ಗಂಟೆಯೂ ಜಾರಿಯಲ್ಲಿರಲಿದ್ದು, ಸಂಬಂಧಪಟ್ಟ ಫ್ಲೈಓವರ್ಗಳಲ್ಲಿ ನಿರ್ದಿಷ್ಟ ವಾಹನಗಳು ಸಂಚರಿಸುವಂತಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಯಾವ ಫ್ಲೈಓವರ್ನಲ್ಲಿ ಯಾವ ವಾಹನಗಳಿಗೆ ನಿರ್ಬಂಧ?ಮೈಸೂರು ರಸ್ತೆ–ಬಿಜಿಎಸ್ ಫ್ಲೈಓವರ್: ಭಾರಿ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ.ಪೀಣ್ಯ ಎಲಿವೇಟೆಡ್ ಕಾರಿಡಾರ್: ಆಟೊ ರಿಕ್ಷಾ ಹಾಗೂ ನಾಲ್ಕು ಚಕ್ರದ ವಾಹನಗಳ ಸಂಚಾರ ನಿಷೇಧ.ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್: ಮಧ್ಯಮ ಮತ್ತು ಭಾರಿ ಸರಕು ಸಾಗಣೆ ವಾಹನಗಳು ಹಾಗೂ ಆಟೊ ರಿಕ್ಷಾಗಳಿಗೆ ನಿರ್ಬಂಧ.

ಡಬಲ್ ಡೆಕ್ಕರ್ ಫ್ಲೈಓವರ್: ಭಾರಿ ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧ.ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ: ದ್ವಿಚಕ್ರ ವಾಹನ, ಆಟೊ ರಿಕ್ಷಾ ಹಾಗೂ ಗೂಡ್ಸ್ ವಾಹನಗಳಿಗೆ ನಿರ್ಬಂಧ.ಸೆಪ್ಟೆಂಬರ್ 4ರಿಂದ ಜಾರಿಗೆ ಬರಲಿರುವ ಈ ಸಂಚಾರ ನಿರ್ಬಂಧಗಳು ಸೆಪ್ಟೆಂಬರ್ 11ರವರೆಗೆ ಮುಂದುವರಿಯಲಿವೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande