

ಬಳ್ಳಾರಿ, 31 ಆಗಸ್ಟ್ (ಹಿ.ಸ.)
ಆ್ಯಂಕರ್: ಬೆಂಗಳೂರಿನ ವಿಜಯನಗರದಲ್ಲಿ ಕರ್ನಾಟಕ ಈಜು ಸಂಸ್ಥೆಯ ವತಿಯಿಂದ ಆಗಸ್ಟ್ 29 ಮತ್ತು 30 ರಂದು ಆಯೋಜಿಸಲಾಗಿದ್ದ ‘27ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್ಶಿಪ್-2026' ಸ್ಪರ್ಧೆಯಲ್ಲಿ ಬಳ್ಳಾರಿಯ ಈಜುಪಟು ರಜನಿ ಲಕ್ಕ ಅವರು ಅಮೋಘ ಸಾಧನೆ ತೋರಿ 5 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
65 ರಿಂದ 69 ವರ್ಷದೊಳಗಿನ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ರಜನಿ ಲಕ್ಕ ಅವರು ಈ ಕೆಳಗಿನ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. 200 ಮೀಟರ್ ಐ.ಎಂ., 100 ಮೀಟರ್ ಬಟರ್ ಫ್ಲೆ, 100 ಮೀಟರ್ ಬ್ರೆಸ್ಟ್ ಸ್ಟೊçÃಕ್, 50 ಮೀಟರ್ ಬ್ರೆಸ್ಟ್ ಸ್ಟೊಕ್, 4*50 ಮೀಟರ್ ಫ್ರೀಸ್ಟೆಲ್ ರಿಲೇ.
ಕ್ರೀಡಾ ಸ್ಫೂರ್ತಿ ಮೆರೆದು ಜಿಲ್ಲೆಗೆ ಕೀರ್ತಿ ತಂದ ರಜನಿ ಲಕ್ಕ ಅವರ ಸಾಧನೆಗೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ ಅವರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್