ಉತ್ತಮ ಆರೋಗ್ಯಕ್ಕಾಗಿ ಪ್ರಾಕೃತಿಕ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲು ಕರೆ
ಉತ್ತಮ ಆರೋಗ್ಯಕ್ಕಾಗಿ ಪ್ರಾಕೃತಿಕ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲು ಕರೆ
ಕೋಲಾರ ನಗರದ ಹೊರ ವಲಯದ ಗೋಲ್ಡನ್ ಸಿಟಿ ಬಡಾವಣೆಯಲ್ಲಿ ಹನುಮ ಆಶ್ರಯದಲ್ಲಿ ಮಾವನ ಅಭಿವೃದ್ಧಿ ಯೋಗ ಟ್ರಸ್ಟ್ ಹಾಗೂ ಸಿದ್ಧ ಸಮಾಧಿ ಯೋಗದ ವತಿಯಿಂದ ನಡೆದ ಆರೋಗ್ಯ ಶಿಬಿರವನ್ನು ಸಾಹಿತಿ ಶರಣರಪ್ಪ ಗಬ್ಬೂರ್ ಉದ್ಘಾಟಿಸಿದರು.


ಕೋಲಾರ ಆಗಸ್ಟ್ ೩೧ (ಹಿ.ಸ) ಆ್ಯಂಕರ್: ಒತ್ತಡದ ಜೀವನದಲ್ಲಿ ಮನುಷ್ಯ ಅನೇಕ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಬದುಕಿನ ದೀರ್ಘಾಯುಷ್ಯಕ್ಕಾಗಿ ಪ್ರಾಕೃತಿಕ ಆರೋಗ್ಯ ಶಿಬಿರಗಳಿಗೆ ಭೇಟಿಯಾಗಿ ಸೂಕ್ತವಾದ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ. ಪ್ರತಿನಿತ್ಯವೂ ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಳ್ಳಬೇಕು. ಇಂತಹ ಉಚಿತವಾದ ಆರೋಗ್ಯ ಶಿಬಿರದಲ್ಲಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆಯಬೇಕೆಂದು ಸಾಹಿತಿ ಡಾ. ಶರಣಪ್ಪ ಗಬ್ಬೂರು ಕರೆ ನೀಡಿದರು.

ನಗರದ ಆರ್ ಎಂ ಗೋಲ್ಡನ್ ಸಿಟಿಯಲ್ಲಿರುವ ಹನುಮ ಆಶ್ರಯದಲ್ಲಿ ಮಾವನ ಅಭಿವೃದ್ಧಿ ಯೋಗ ಟ್ರಸ್ಟ್ ಹಾಗೂ ಸಿದ್ಧ ಸಮಾಧಿ ಯೋಗದ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಿದ್ದ ಸಮಾಧಿ ಯೋಗದ ಅಧ್ಯಕ್ಷ ಪೋಸ್ಟ್ ನಾರಾಯಣಸ್ವಾಮಿ ಮಾತನಾಡಿ ಈ ಶಿಭಿರದಲ್ಲಿ ಆರು ದಿನಗಳ ಕಾಲ ಉಚಿತ ಆರೋಗ್ಯವನ್ನು ನೀಡಲಾಗುತ್ತದೆ. ಪ್ರವೇಶ ಶುಲ್ಕವನ್ನು ಕೇವಲ ಒಬ್ಬರಿಗೆ ೩೦೦ ರೂಪಾಯಿಯಂತೆ ತೆಗೆದುಕೊಂಡು ದಿನಕ್ಕೆ ಅರ್ಧಗಂಟೆ ಕಾಲ ಆರು ದಿನಗಳ ಕಾಲ ಉಚಿತ ಆರೋಗ್ಯವನ್ನು ನೀಡಲಾಗುತ್ತದೆ ಎಂದರು.

ಕಲರ್ ತೆರೆಪಿ ಚಿಕಿತ್ಸಕ ಡಾ. ಶಿವಣ್ಣ ಮಾತಾನಾಡಿ ಆಕ್ಯೂಪ್ರಶರ್, ಕೈರೋಪ್ರಾಕ್ಟಿಕ್, ವೈಬ್ರೇಷನ್, ಮಸಾಜ್, ಮ್ಯಾಗ್ನೆಟಿಕ್ ಥೆರಪಿ, ಫಿಸಿಯೊತೆರಪಿ, ಯೋಗ ತೆರಪಿ ಇವುಗಳ ಬಗ್ಗೆ ಅರ್ಧಗಂಟೆಗೆ ಹೆಚ್ಚು ಕಾಲ ಆರೋಗ್ಯದ ಬಗ್ಗೆ ಶಿಬಿರ ನೀಡಲಾಗುತ್ತದೆ ಅದರಿಂದ ಇದರ ಬಗ್ಗೆ ಹೆಚ್ಚು ಜನರು ಸದುಪಯೋಗ ಪಡೆದುಕೊಳ್ಳಬೇಕೆಂದರು.

ಜೋದ್ ಪುರ್ ದ ಡಾ. ವಿ.ಆರ್ ಚೌದರಿ ಮಾತನಾಡಿ ದೀರ್ಘಕಾಲದ ತಲೆನೋವು, ಕುತ್ತಿಗೆ ನೋನೋವು ಕೈ ಕಾಲುಗಳಲ್ಲಿ ಮರಗಟ್ಟುವಿಕೆ, ಬೆನ್ನು ಮತ್ತು ಸೊಂಟದ ನೋವು, ಮೊಣಕಾಲು ನೋವು, ಮಲಬದ್ಧತೆ, ಮಧುಮೇಹ, ಮೂಲವ್ಯಾಧಿ, ಮಾನಸಿಕ ಒತ್ತಡ, ಹೊಕ್ಕುಳ ಸ್ಥಳಾಂತರ, ಇನ್ನೂ ಮುಂತಾದ ಸಮಸ್ಯೆಗಳ ಬಗ್ಗೆ ಆರು ದಿನಗಳ ಕೋಲಾರದ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande