ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಹೆರಿಟೇಜ್ ಸ್ಟೇಷನ್ ಮಹೋತ್ಸವ
ಬಳ್ಳಾರಿ, 31 ಆಗಸ್ಟ್ (ಹಿ.ಸ.) ಆ್ಯಂಕರ್: ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಇಂದು ಹೆರಿಟೇಜ್ ಸ್ಟೇಷನ್ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುದರ್ಶನ ಭಾರದ್ವಾಜ್ ಹಿರಿಯ ವಿಭಾಗೀಯ ಯಾಂತ್ರಿಕ ಎಂಜಿನಿಯರ್ (ಪರಿಸರ, ಹೌಸ್ ಕೀಪಿಂಗ್ ಮತ್ತು ನಿರ್ವಹಣೆ ಹುಬ್ಬಳ್ಳಿ) ಮಾತನಾಡಿ , ಬಳ್ಳಾರಿ ರ
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಹೆರಿಟೇಜ್ ಸ್ಟೇಷನ್ ಮಹೋತ್ಸವ


ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಹೆರಿಟೇಜ್ ಸ್ಟೇಷನ್ ಮಹೋತ್ಸವ


ಬಳ್ಳಾರಿ, 31 ಆಗಸ್ಟ್ (ಹಿ.ಸ.)

ಆ್ಯಂಕರ್: ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಇಂದು ಹೆರಿಟೇಜ್ ಸ್ಟೇಷನ್ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸುದರ್ಶನ ಭಾರದ್ವಾಜ್ ಹಿರಿಯ ವಿಭಾಗೀಯ ಯಾಂತ್ರಿಕ ಎಂಜಿನಿಯರ್ (ಪರಿಸರ, ಹೌಸ್ ಕೀಪಿಂಗ್ ಮತ್ತು ನಿರ್ವಹಣೆ ಹುಬ್ಬಳ್ಳಿ) ಮಾತನಾಡಿ , ಬಳ್ಳಾರಿ ರೈಲ್ವೆ ನಿಲ್ದಾಣವು ಕೇವಲ ರೈಲುಗಳ ಆಗಮನ ಮತ್ತು ನಿರ್ಗಮನದ ಸ್ಥಳವಲ್ಲ. ಇದು ಈ ಪ್ರದೇಶದ ಇತಿಹಾಸ, ಬೆಳವಣಿಗೆ ಮತ್ತು ಪರಿವರ್ತನೆಗೆ ಸಾಕ್ಷಿಯಾಗಿರುವ ಜೀವಂತ ಪರಂಪರೆಯ ತಾಣವಾಗಿದೆ ಎಂದು ಹೇಳಿದರು.

ರೈಲ್ವೆ ಮಹೋತ್ಸವದ ಅಂಗವಾಗಿ ನಿಲ್ದಾಣದ ಆವರಣದಲ್ಲಿ ರೈಲ್ವೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಧ್ವಜ ಕವಾಯತ್ ನಡೆಸಲಾಯಿತು.

ಶಾಲಾ ವಿದ್ಯಾರ್ಥಿಗಳಿಗಾಗಿ ನಮ್ಮ ಬಳ್ಳಾರಿ – ನಮ್ಮ ಪಾರಂಪರಿಕ ರೈಲು ನಿಲ್ದಾಣ” ಎಂಬ ವಿಷಯದ ಕುರಿತು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಗಳನ್ನು ಆಯೋಜಿಸಲಾಯಿತು.

ಭಾರತೀಯ ರೈಲ್ವೆಯ ಶ್ರೀಮಂತ ಇತಿಹಾಸ ಹಾಗೂ ಪಾರಂಪರಿಕ ಹಿನ್ನೆಲೆಯನ್ನು ಬಿಂಬಿಸುವ ರೈಲ್ವೆ ಪಾರಂಪರಿಕ ಛಾಯಾಚಿತ್ರಗಳ ಸಂಗ್ರಹದ ಪೋಟೋ ಗ್ಯಾಲರಿಯು ನೋಡುಗರ ಗಮನ ಸೆಳೆಯಿತು.

ಕೊನೆಯಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸುವುದರ ಜೊತೆಗೆ, ಸಫಾಯಿ ಕರ್ಮಚಾರಿಗಳು ಹಾಗೂ ಸಾಂಸ್ಕೃತಿಕ ತಂಡದವರೆಗೆ ಉಡುಗರೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande