ಕೋಲಾರ ಅಲ್ ಅಮೀನ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಕೋಲಾರ ಅಲ್ ಅಮೀನ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ
ಕೋಲಾರ ನಗರದ ಅಲ್ ಅಮೀನ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ನಡೆಯಿತು.


ಕೋಲಾರ,31 ಆಗಸ್ಟ್ (ಹಿ.ಸ.)

ಆ್ಯಂಕರ್ : ಅಲ್ ಅಮೀನ್ ಸಮೂಹ ಸಂಸ್ಥೆಗಳು ೧೯೭೨ ರಿಂದ ನಮ್ಮ ತಂದೆಯವರಾದ ಡಾ. ಮುಮ್ತಾಜ್ ಅಹ್ಮದ್ ಖಾನ್ ರವರು ಅಲ್ಪಸಂಖ್ಯಾತರ ಮಕ್ಕಳಿಗಾಗಿ ಹಾಗೂ ಅವರ ಶ್ರೇಯೋಭಿವೃದ್ಧಿಗಾಗಿ ಆರಂಭಿಸಿದರು. ಉರ್ದು ಹಿರಿಯ ಪ್ರಾಥಮಿಕ ಶಾಲೆ, ಉರ್ದು ಪ್ರೌಢಶಾಲೆ, ಡಿ ಎಲ್.ಇಡ್ ತದನಂತರ ಪದವಿ ಪೂರ್ವ ಕಾಲೇಜು ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು, ಆಂಗ್ಲ ಮಾಧ್ಯಮ ಪ್ರೌಢಶಾಲೆಯನ್ನ ಪ್ರಾರಂಭಿಸಿದರು. ಪ್ರತಿಯೊಂದು ಸಮಾಜದಲ್ಲಿ ಶಿಕ್ಷಣವನ್ನು ಮತ್ತು ಆರೋಗ್ಯವನ್ನು ಕಾಪಾಡಿಕೊಂಡರೆ ಪ್ರತಿಯೊಂದು ಧರ್ಮದ ಸಮಾಜವು ಎಲ್ಲಾ ದೃಷ್ಟಿಯಿಂದಲೂ ಆರೋಗ್ಯಕರವಾಗಿರುತ್ತದೆ ಎಂದು ಅಲ್ ಅಮೀನ್ ಸಂಸ್ಥೆಯ ಅಧ್ಯಕ್ಷ ಉಮರ್ ಇಸ್ಮಾಯಿಲ್ ಖಾನ್ ಅಭಿಪ್ರಾಯಪಟ್ಟರು.

ನಗರದ ಪ್ರತಿಷ್ಠಿತ ಅಲ್ ಅಮೀನ್ ಡಾ. ಮುಮ್ತಾಜ್ ಅಹಮದ್ ಖಾನ್ ಪದವಿ ಕಾಲೇಜಿನಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಇಂದಿನ ನಮ್ಮ ಮಕ್ಕಳು ಅಡ್ಡದಾರಿಗಳು ಹಿಡಿಯದೆ ಇದ್ದರೆ ಹಾಗೂ ಆರೋಗ್ಯದ ದುಷ್ಪರಿಣಾಮಗಳಿಂದ ದೂರವಿದ್ದು ಶಿಕ್ಷಣವನ್ನು ಕಲಿತು ನಿಮ್ಮಗಳ ಕಾಲಿನ ಮೇಲೆ ನಿಂತು ನಿಮ್ಮದೇ ಜೀವನವನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರ ಆದ್ಯ ಕರ್ತವ್ಯ ಎಂದು ಹೇಳಿದರು.

ಪದವಿಯಲ್ಲಿ ಮೊದಲನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ವಿಸ್ತೃತ ಎನ್ ಪ್ರತಿ ಸೆಮಿಸ್ಟರ್ಗಳಲ್ಲಿ ಒಂದೊAದು ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾರೆ ಮತ್ತು ದ್ವಿತೀಯ ರ್ಯಾಂಕ್ ಪಡೆದ ಮಿಸ್ಬಾ ರವರು ಪ್ರತಿ ಸೆಮಿಸ್ಟರ್ಗಳಲ್ಲಿ ಒಂದೊAದು ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾರೆ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.

ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಮಾತನಾಡಿ, ಪ್ರತಿ ವಿದ್ಯಾರ್ಥಿಯು ಮತ್ತು ವಿದ್ಯಾರ್ಥಿನಿಯು ಮೊದಲಿಗೆ ನಿಮ್ಮ ತಂದೆ ತಾಯಿಗಳನ್ನು ಗೌರವಿಸುವುದು ಮತ್ತು ನಮ್ಮ ಪ್ರಾಧ್ಯಾಪಕರನ್ನು ಗೌರವಿಸುವುದು, ನಾವು ಓದಿದ ಸಂಸ್ಥೆಯನ್ನು ಸಹ ಗೌರವಿಸುವುದು ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಪದವಿಪೂರ್ವ ಕಾಲೇಜಿನ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮತ್ತು ಉನ್ನತ ವ್ಯಾಸಂಗವನ್ನು ನೀಡಿದ್ದಲ್ಲಿ ನಮ್ಮ ಮಕ್ಕಳು ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿದರು.

ಡಾ. ಮಹಮ್ಮದ್ ಷಫೀ ಉರ್ ರಹಮಾನ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ತಮ್ಮ ತಮ್ಮ ಆರೋಗ್ಯಗಳನ್ನು ಕಾಪಾಡಿಕೊಳ್ಳುವುದು ಶಿಕ್ಷಣ ಪಡೆದಂತಹ ನೀವು ನಿಮ್ಮ ಪೋಷಕರಿಗೂ ಅರಿವನ್ನು ಮೂಡಿಸುವುದರೊಂದಿಗೆ ನಾವು ಆರೋಗ್ಯವಂತರಾಗಿರುತ್ತೇವೆ ಎಂದು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮಲ್ಲಿ ಅಲ್ ಅಮೀನ್ ಜಂಟಿ ಕಾರ್ಯದರ್ಶಿ ಅಫ್ಜಲ್, ಪದವಿ ಕಾಲೇಜಿನ ಪ್ರಾಂಶುಪಾಲೆ ಷಮೀಮ್ ಸಲ್ಮಾ, ಅಲ್ ಅಮೀನ್ ಸಂಸ್ಥೆಯ ಕೋ ಆರ್ಡಿನೇಟರ್ ಜಾಬೀರ್, ಅಲ್ ಅಮೀನ್ ಡಾ.ಮುಮ್ತಾಜ್ ಅಹಮದ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಿಯಾಜ್ ಅಹ್ಮದ್ ಎಂ ಹಾಗೂ ನಮ್ಮ ಕಾಲೇಜಿನ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande