ಬಳ್ಳಾರಿ ಅಂಚೆ : 34 ಗ್ರಾಮೀಣ ಅಂಚೆ ಸೇವಕರ ಹುದ್ದೆ - ಅರ್ಜಿ ಆಹ್ವಾನ
ಬಳ್ಳಾರಿ, 31 ಆಗಸ್ಟ್ (ಹಿ.ಸ.) ಆ್ಯಂಕರ್: ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕರು, ಸಹಾಯಕ ಶಾಖಾ ಅಂಚೆಪಾಲಕರು ಹಾಗೂ ಅಂಚೆ ಸೇವಕರು ಸೇರಿದಂತೆ ಒಟ್ಟು 34 ಗ್ರಾಮೀಣ ಅಂಚೆ ಸೇವಕರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ
ಬಳ್ಳಾರಿ ಅಂಚೆ : 34 ಗ್ರಾಮೀಣ ಅಂಚೆ ಸೇವಕರ ಹುದ್ದೆ - ಅರ್ಜಿ ಆಹ್ವಾನ


ಬಳ್ಳಾರಿ, 31 ಆಗಸ್ಟ್ (ಹಿ.ಸ.)

ಆ್ಯಂಕರ್: ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕರು, ಸಹಾಯಕ ಶಾಖಾ ಅಂಚೆಪಾಲಕರು ಹಾಗೂ ಅಂಚೆ ಸೇವಕರು ಸೇರಿದಂತೆ ಒಟ್ಟು 34 ಗ್ರಾಮೀಣ ಅಂಚೆ ಸೇವಕರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆನ್ಲೈನ್ ಒನ್-ಟೈಮ್ ನೋಂದಣಿ: 19.09.2026 (ಸಂಜೆ 05 ಗಂಟೆಯವರೆಗೆ).

ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ: 02.09.2026 ರಿಂದ 21.09.2026 (ಸಂಜೆ 05 ಗಂಟೆಯವರೆಗೆ).

ಅರ್ಜಿ ತಿದ್ದುಪಡಿಗೆ ಕಾಲಾವಕಾಶ: 23.09.2026 ರಿಂದ 24.09.2026 (ಸಂಜೆ 05 ಗಂಟೆಯವರೆಗೆ).

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಅರ್ಹತೆಗಳನ್ನು ಪರಿಶೀಲಿಸಿ, ಅಧಿಕೃತ ವೆಬ್ಸೈಟ್ https://indiapost.gov.in/gdsonlineengagement ಮೂಲಕ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಳ್ಳಾರಿ ಅಂಚೆ ವಿಭಾಗದ ಅಧೀಕ್ಷಕ ಆರ್. ಅಶೋಕ್ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande