ಪಾದಯಾತ್ರೆ ಯಶಸ್ವಿಗೆ ಬಿ.ಶ್ರೀರಾಮುಲು ಮನವಿ
ಬಳ್ಳಾರಿ, 31 ಆಗಸ್ಟ್ (ಹಿ.ಸ.) ಆ್ಯಂಕರ್: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ, ಹಗರಣಗಳು ಮತ್ತು ಆರೋಪಗಳ ವಿರುದ್ಧ ಕರ್ನಾಟಕ ಬಿಜೆಪಿ ಮಂಗಳವಾರದಿಂದ ಪ್ರಾರಂಭಿಸಲಿರುವ ಲಿಂಗಸೂಗೂರು - ಬಳ್ಳಾರಿ ಪಾದಯಾತ್ರೆಯನ್ನು ಜನರು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಮುಖಂಡ ಬಿ. ಶ್ರೀರ
ಪಾದಯಾತ್ರೆ ಯಶಸ್ವಿಗೆ ಬಿ.ಶ್ರೀರಾಮುಲು ಮನವಿ


ಬಳ್ಳಾರಿ, 31 ಆಗಸ್ಟ್ (ಹಿ.ಸ.)

ಆ್ಯಂಕರ್:

ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ, ಹಗರಣಗಳು ಮತ್ತು ಆರೋಪಗಳ ವಿರುದ್ಧ ಕರ್ನಾಟಕ ಬಿಜೆಪಿ ಮಂಗಳವಾರದಿಂದ ಪ್ರಾರಂಭಿಸಲಿರುವ ಲಿಂಗಸೂಗೂರು - ಬಳ್ಳಾರಿ ಪಾದಯಾತ್ರೆಯನ್ನು ಜನರು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಅವರು ಮನವಿ ಮಾಡಿದ್ದಾರೆ.

ಬಳ್ಳಾರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಸೋಮವಾರ ಈ ಮಾಹಿತಿ ನೀಡಿದ ಅವರು, ಲಿಂಗಸೂಗೂರು - ಬಳ್ಳಾರಿ ಪಾದಯಾತ್ರೆಯ ರೂಪುರೇಷಗಳು ಅಂತಿಮಗೊಂಡಿವೆ. ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯ - ರಾಷ್ಟ್ರಮಟ್ಟದ ಮುಖಂಡರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪಾದಯಾತ್ರೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.

ಗಂಗಾವತಿ ಶಾಸಕರಾಗಿರುವ ಜಿ. ಜನಾದರ್ನ ರೆಡ್ಡಿ, ರಾಯಚೂರಿನ ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಕುಡಚಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್, ಕಂಪ್ಲಿಯ ಮಾಜಿ ಶಾಸಕ ಟಿ.ಹೆಚ್. ಸುರೇಶ್ಬಾಬು, ಪಕ್ಷದ ಮುಖಂಡರಾದ ಕೆ.ಎಸ್. ದಿವಾಕರ್, ಎಸ್. ಗುರುಲಿಂಗನ ಗೌಡ, ಹೆಚ್. ಹನುಮಂತಪ್ಪ, ಓಬಳೇಶ್, ಗೋನಾಳ್ ಮುರಹರಿಗೌಡ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande