ಗೋಲಗೇರಿಯಲ್ಲಿ ಯಲ್ಲಾಲಿಂಗ ಗುರುಗಳ ಪುಣ್ಯಾರಾಧನೆ
ವಿಜಯಪುರ, 01 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಗೋಲಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಮಪೂಜ್ಯ ಶ್ರೀ ಯಲ್ಲಾಲಿಂಗ ಗುರುಗಳ ಪುಣ್ಯಾರಾಧನೆ ಸಮಾರಂಭವು ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮ
ಗಾರ್ಡನ್


ವಿಜಯಪುರ, 01 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಗೋಲಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಮಪೂಜ್ಯ ಶ್ರೀ ಯಲ್ಲಾಲಿಂಗ ಗುರುಗಳ ಪುಣ್ಯಾರಾಧನೆ ಸಮಾರಂಭವು ಭಕ್ತಿಭಾವ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖಂಡರು, ಪರಮಪೂಜ್ಯ ಶ್ರೀ ಯಲ್ಲಾಲಿಂಗ ಗುರುಗಳ ದಿವ್ಯ ಸಂದೇಶಗಳು, ಸತ್ಚಿಂತನೆಗಳು ಹಾಗೂ ಸಮಾಜಮುಖಿ ಆಲೋಚನೆಗಳು ನಮ್ಮೆಲ್ಲರ ಜೀವನಕ್ಕೆ ಸದಾ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

ಸಮಾಜದ ಒಳಿತಿಗಾಗಿ, ಮಾನವೀಯ ಮೌಲ್ಯಗಳ ಬೆಳವಣಿಗೆಗಾಗಿ ಹಾಗೂ ಜನರಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಮಹನೀಯರು ನೀಡಿರುವ ಸಂದೇಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಅವರು ತಿಳಿಸಿದರು.

ಪರಮಪೂಜ್ಯ ಶ್ರೀ ಯಲ್ಲಾಲಿಂಗ ಗುರುಗಳು ತಮ್ಮ ಜೀವನದ ಮೂಲಕ ಸರಳತೆ, ಸೇವೆ, ಸತ್ಯನಿಷ್ಠೆ ಹಾಗೂ ಸಮಾಜಮುಖಿ ಚಿಂತನೆಯ ಮಹತ್ವವನ್ನು ಸಾರಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗುರುಗಳ ಚಿಂತನೆಗಳು ಕೇವಲ ಒಂದು ಸಮುದಾಯ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅವು ಸಮಸ್ತ ಸಮಾಜದ ಕಲ್ಯಾಣಕ್ಕಾಗಿ ನೀಡಿದ ಅಮೂಲ್ಯ ಸಂದೇಶಗಳಾಗಿದ್ದು, ಯುವಪೀಳಿಗೆ ಸೇರಿದಂತೆ ಪ್ರತಿಯೊಬ್ಬರೂ ಅವರ ಜೀವನ ಮತ್ತು ಸಂದೇಶಗಳಿಂದ ಪ್ರೇರಣೆ ಪಡೆಯಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಪುಣ್ಯಾರಾಧನೆ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸುವುದರ ಜೊತೆಗೆ, ಗುರುಗಳ ಆದರ್ಶ ಮತ್ತು ಸಂದೇಶಗಳನ್ನು ಸ್ಮರಿಸುವ ಮಹತ್ವದ ವೇದಿಕೆಯಾಗಿ ರೂಪುಗೊಂಡಿತು. ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಗುರು-ಹಿರಿಯರು, ಗೋಲಗೇರಿ ಗ್ರಾಮದ ಸಾರ್ವಜನಿಕರು, ಭಕ್ತಾದಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande