ಶಿವಾಜಿನಗರ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
ಶಿವಾಜಿನಗರ ಸುತ್ತಮುತ್ತ ಟ್ರಾಫಿಕ್ ಬದಲಾವಣೆ
ಶಿವಾಜಿನಗರ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ


ಬೆಂಗಳೂರು, 28 ಆಗಸ್ಟ್ (ಹಿ.ಸ.):

ಆ್ಯಂಕರ್:

ಸೇಂಟ್ ಮೇರಿಸ್ ಬಸಿಲಿಕಾ ಧ್ವಜಾರೋಹಣದ ಅಂಗವಾಗಿ ಆಗಸ್ಟ್ 29ರಂದು ಶಿವಾಜಿನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಂದು ಮಧ್ಯಾಹ್ನ 1 ರಿಂದ ರಾತ್ರಿ 10 ರವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ.

ಸಂಚಾರ ನಿರ್ಬಂಧವಿರುವ ಪ್ರಮುಖ ಮಾರ್ಗಗಳು:ಬಾಳೇಕುಂದ್ರಿ ವೃತದಿಂದ ಜ್ಯೋತಿ ಕೆಫೆ ಜಂಕ್ಷನ್ ವರೆಗೆಶಿವಾಜಿ ಸರ್ಕಲ್ ನಿಂದ ಜ್ಯೋತಿ ಕೆಫೆ ಜಂಕ್ಷನ್ ವರೆಗೆಬಿಆರ್ವಿ ಜಂಕ್ಷನ್ ನಿಂದ ಸೆಲೆಕ್ಟ್ ಜಂಕ್ಷನ್ ವರೆಗೆಸೆಲೆಕ್ಟ್ ಜಂಕ್ಷನ್ ನಿಂದ ಜ್ಯೋತಿ ಕೆಫೆ ಜಂಕ್ಷನ್ ವರೆಗೆಬೋರಿಂಗ್ ಆಸ್ಪತ್ರೆ ಜಂಕ್ಷನ್ ನಿಂದ ಸೆಲೆಕ್ಟ್ ಜಂಕ್ಷನ್ ವರೆಗೆಕ್ವಾಡ್ರೆಂಟ್ ವೃತದಿಂದ ಆರ್ಎಂಎಸ್ ಜಂಕ್ಷನ್ ವರೆಗೆಬಂಬೂ ಬಜಾರ್ ನಿಂದ ಸುನ್ನಿ ವೃತದವರೆಗೆಸುನ್ನಿ ವೃತದಿಂದ ಆರ್ಎಂಎಸ್ ಜಂಕ್ಷನ್ ವರೆಗೆ ನಿರ್ಬಂಧ ಇರಲಿದೆ ಎಂದು ಸಂಚಾರ ಪೋಲಿಸ್ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande