ಪರಸ್ಪರ ಕಲಿಕೆ, ಸಂವಾದದಿಂದ ಸುಖ-ಸಮೃದ್ಧಿಗೆ ದಾರಿ: ಪ್ರಧಾನಿ ಮೋದಿ
ನವದೆಹಲಿ, 26 ಆಗಸ್ಟ್ (ಹಿ.ಸ.): ಆ್ಯಂಕರ್:ಪರಸ್ಪರ ಕಲಿಯುವುದು, ಒಬ್ಬರ ಮಾತನ್ನು ಮತ್ತೊಬ್ಬರು ಗಮನವಿಟ್ಟು ಆಲಿಸುವುದು ಹಾಗೂ ನಿಸ್ವಾರ್ಥ ಭಾವದಿಂದ ನಡೆದುಕೊಳ್ಳುವುದು ಜೀವನದಲ್ಲಿ ಸುಖ-ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಬುಧವಾರ
प्रधानमंत्री नरेन्द्र


ನವದೆಹಲಿ, 26 ಆಗಸ್ಟ್ (ಹಿ.ಸ.):

ಆ್ಯಂಕರ್:ಪರಸ್ಪರ ಕಲಿಯುವುದು, ಒಬ್ಬರ ಮಾತನ್ನು ಮತ್ತೊಬ್ಬರು ಗಮನವಿಟ್ಟು ಆಲಿಸುವುದು ಹಾಗೂ ನಿಸ್ವಾರ್ಥ ಭಾವದಿಂದ ನಡೆದುಕೊಳ್ಳುವುದು ಜೀವನದಲ್ಲಿ ಸುಖ-ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಬುಧವಾರ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಸುಭಾಷಿತದಲ್ಲಿ ಭಾರತೀಯ ಜ್ಞಾನ ಪರಂಪರೆಯಲ್ಲಿರುವ ಪರಸ್ಪರ ಕಲಿಕೆ, ವಿನಯ, ಸಂವಾದ ಮತ್ತು ನಿಸ್ವಾರ್ಥತೆಯ ಮಹತ್ವವನ್ನು ವಿವರಿಸಿದ್ದಾರೆ.

“ಜ್ಞಾನವೃದ್ಧಾಃ ಪ್ರಶಂಸಂತಿ ಶುಶ್ರೂಷಂತಃ ಪರಸ್ಪರಮ್। ವಿನಿವೃತ್ತಾಭಿಸಂಧಾನಾಃ ಸುಖಮೇಧಂತಿ ಸರ್ವಶಃ॥” ಎಂಬ ಸುಭಾಷಿತವನ್ನು ಹಂಚಿಕೊಂಡಿರುವ ಅವರು, ಪರಸ್ಪರರಿಂದ ಕಲಿಯಲು ಹಾಗೂ ಅವರ ಮಾತುಗಳನ್ನು ಆಲಿಸಲು ಸದಾ ಸಿದ್ಧರಾಗಿರುವವರನ್ನು ಜ್ಞಾನಿಗಳು ಪ್ರಶಂಸಿಸುತ್ತಾರೆ ಎಂದು ತಿಳಿಸಿದ್ದಾರೆ.

ಸ್ವಾರ್ಥಪೂರ್ಣ ಉದ್ದೇಶ ಹಾಗೂ ಗುಪ್ತ ಹಿತಾಸಕ್ತಿಗಳಿಂದ ದೂರವಿದ್ದು, ನಿಸ್ವಾರ್ಥ ಭಾವದಿಂದ ಪರಸ್ಪರ ಸಹಕಾರ ಮತ್ತು ಸಂವಾದ ನಡೆಸುವವರು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಸುಖ ಮತ್ತು ಪ್ರಗತಿ ಸಾಧಿಸುತ್ತಾರೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.

ಈ ಮೂಲಕ ಭಾರತೀಯ ಜ್ಞಾನ ಪರಂಪರೆಯಲ್ಲಿನ ಸಂವಾದ, ವಿನಯ, ಪರಸ್ಪರ ಕಲಿಕೆ ಹಾಗೂ ನಿಸ್ವಾರ್ಥ ಆಚಾರದ ಮೌಲ್ಯಗಳನ್ನು ಪ್ರಧಾನಿ ಮೋದಿ ಸಾರಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande