
ನವದೆಹಲಿ, 26 ಆಗಸ್ಟ್ (ಹಿ.ಸ.):
ಆ್ಯಂಕರ್:ಮಿಲಾದ್-ಉನ್-ನಬಿ ಹಾಗೂ ಓಣಂ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
‘ಎಕ್ಸ್’ನಲ್ಲಿ ಸಂದೇಶ ನೀಡಿರುವ ಪ್ರಧಾನಿ ಮೋದಿ, ಮಿಲಾದ್-ಉನ್-ನಬಿ ಹಬ್ಬವು ಎಲ್ಲರಲ್ಲೂ ಏಕತೆ ಮತ್ತು ಸಂತೋಷದ ಭಾವನೆಯನ್ನು ಮತ್ತಷ್ಟು ಬಲಪಡಿಸಲಿ ಎಂದು ಹಾರೈಸಿದ್ದಾರೆ. ದಯೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಸದಾ ಎಲ್ಲರಿಗೂ ಮಾರ್ಗದರ್ಶನ ನೀಡಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ. “ಈದ್ ಮುಬಾರಕ್! ಮಿಲಾದ್-ಉನ್-ನಬಿ ಶುಭಾಶಯಗಳು” ಎಂದು ತಿಳಿಸಿದ್ದಾರೆ.
ಓಣಂ ಹಬ್ಬದ ಶುಭಾಶಯ ಕೋರಿರುವ ಅವರು, ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಈ ಸಡಗರದ ಹಬ್ಬವು ಸಮಾಜದಲ್ಲಿ ಸಂತಸ, ಏಕತೆ ಮತ್ತು ಸಮೃದ್ಧಿಯ ಭಾವನೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಪ್ರಾರ್ಥಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.