ಇರಾನ್ಗೆ ಯುಎಇ ಕಠಿಣ ಪೆಟ್ಟು: ಎಲ್ಲ ವಾಣಿಜ್ಯ ಹಾಗೂ ಹಣಕಾಸು ವಹಿವಾಟು ಸ್ಥಗಿತ
ಅಬುಧಾಬಿ/ವಾಷಿಂಗ್ಟನ್,19 ಆಗಸ್ಟ್ (ಹಿ.ಸ.): ಆ್ಯಂಕರ್:ಇರಾನ್‌ನಿಂದ ನಡೆದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ಬೆನ್ನಲ್ಲೇ ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಇರಾನ್‌ನೊಂದಿಗೆ ಎಲ್ಲ ರೀತಿಯ ವ್ಯಾಪಾರ, ವಾಣಿಜ್ಯ ಚಟುವಟಿಕೆ ಹಾಗೂ ಹ
सांकेतिक


ಅಬುಧಾಬಿ/ವಾಷಿಂಗ್ಟನ್,19 ಆಗಸ್ಟ್ (ಹಿ.ಸ.):

ಆ್ಯಂಕರ್:ಇರಾನ್‌ನಿಂದ ನಡೆದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯ ಬೆನ್ನಲ್ಲೇ ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಇರಾನ್‌ನೊಂದಿಗೆ ಎಲ್ಲ ರೀತಿಯ ವ್ಯಾಪಾರ, ವಾಣಿಜ್ಯ ಚಟುವಟಿಕೆ ಹಾಗೂ ಹಣಕಾಸು ವಹಿವಾಟುಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿದೆ.

ಪ್ರಾದೇಶಿಕ ಅಸ್ಥಿರತೆ ಹೆಚ್ಚುತ್ತಿರುವುದು ಹಾಗೂ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಎದುರಾಗಿರುವ ಅಪಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯದ ಕಾರ್ಯತಂತ್ರ ಸಂವಹನ ವಿಭಾಗದ ನಿರ್ದೇಶಕ ಅಫ್ರಾ ಅಲ್ ಹಮೇಲಿ ತಿಳಿಸಿದ್ದಾರೆ.

ಇರಾನ್‌ನಿಂದ ಯುಎಇಯತ್ತ ಸಮುದ್ರ ಸಂಚಾರವನ್ನು ಗುರಿಯಾಗಿಸಿಕೊಂಡು ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿತ್ತು. ಯುಎಇ ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿಗಳನ್ನು ಪತ್ತೆಹಚ್ಚಿದ್ದು, ಒಂದು ಕ್ಷಿಪಣಿ ಯುಎಇಯ ಸಮುದ್ರ ಗಡಿಯ ಹೊರಗೆ ಸಮುದ್ರಕ್ಕೆ ಬಿದ್ದರೆ, ಮತ್ತೊಂದು ಯುಎಇಯ ಸಮುದ್ರ ಗಡಿಯೊಳಗೆ ಬಿದ್ದಿದೆ. ಘಟನೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.

ಯುಎಇಯ ಭದ್ರತೆ ಹಾಗೂ ಸಮುದ್ರ ಸಂಚಾರಕ್ಕೆ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ದೇಶದ ರಕ್ಷಣಾ ವ್ಯವಸ್ಥೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ನಾಗರಿಕರು ಅಧಿಕೃತ ಮೂಲಗಳಿಂದ ಲಭ್ಯವಾಗುವ ಮಾಹಿತಿಯನ್ನಷ್ಟೇ ನಂಬುವಂತೆ ಸರ್ಕಾರ ಮನವಿ ಮಾಡಿದೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನೊಂದಿಗೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೀಮಿತ ಸಮುದ್ರ ಸಂಚಾರ ಮತ್ತು ಹಡಗಿನ ಮೇಲೆ ದಾಳಿ ನಡೆದಿರುವ ವರದಿಗಳ ನಡುವೆಯೂ ಹೋರ್ಮುಜ್ ಜಲಸಂಧಿ ತೆರೆದಿದ್ದು, ಸಂಚಾರ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. ಹೋರ್ಮುಜ್ ಜಲಸಂಧಿಯನ್ನು ಅಮೆರಿಕದ ಹೊಸ ಪ್ರದೇಶವೆಂದು ಬಿಂಬಿಸುವ ಚಿತ್ರವೊಂದನ್ನೂ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇರಾನ್ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ತನ್ನದೇ ಷರತ್ತುಗಳನ್ನು ಮುಂದಿಟ್ಟಿದೆ. ಅಮೆರಿಕ-ಇರಾನ್ ನಡುವಿನ ವ್ಯಾಪಕ ಮಾತುಕತೆ ಪುನರಾರಂಭಕ್ಕೂ ಮುನ್ನ ಹೋರ್ಮುಜ್ ಜಲಸಂಧಿ ಕುರಿತು ಇರಾನ್ ಮತ್ತು ಒಮಾನ್ ನಡುವೆ ದ್ವಿಪಕ್ಷೀಯ ಒಪ್ಪಂದವಾಗುವ ನಿರೀಕ್ಷೆಯಲ್ಲಿರುವುದಾಗಿ ಕತಾರ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಮಾತುಕತೆ, ಸಹಕಾರ ಹಾಗೂ ಪ್ರಾದೇಶಿಕ ಏಕೀಕರಣಕ್ಕೆ ಯುಎಇ ಬದ್ಧವಾಗಿದೆ ಎಂದು ಅಫ್ರಾ ಅಲ್ ಹಮೇಲಿ ಪುನರುಚ್ಚರಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande