ಅಮರನಾಥ ಯಾತ್ರೆ ಚುರುಕು: ಮೂರನೇ ತಂಡದಲ್ಲಿ 4,812 ಭಕ್ತರ ಪ್ರಯಾಣ ಆರಂಭ
ಜಮ್ಮು, 04 ಜುಲೈ (ಹಿ.ಸ.): ಆ್ಯಂಕರ್: ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ವಾರ್ಷಿಕ ಶ್ರೀ ಅಮರನಾಥ ಯಾತ್ರೆಗಾಗಿ ಮೂರನೇ ತಂಡದ 4,812 ಮಂದಿ ಯಾತ್ರಿಕರು ಶನಿವಾರ ಮುಂಜಾನೆ ಜಮ್ಮುವಿನ ಭಗವತಿ ನಗರ ಯಾತ್ರಿನಿವಾಸದಿಂದ ಪವಿತ್ರ ಗುಹೆಯತ್ತ ಪ್ರಯಾಣ ಬೆಳೆಸಿದರು. ಅಧಿಕೃತ ಮಾಹಿತಿಯ ಪ್ರಕಾರ, ಈ ತಂಡದಲ್ಲಿ 2,0
ಅಮರನಾಥ ದೇವಸ್ಥಾನ


ಜಮ್ಮು, 04 ಜುಲೈ (ಹಿ.ಸ.):

ಆ್ಯಂಕರ್:

ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ವಾರ್ಷಿಕ ಶ್ರೀ ಅಮರನಾಥ ಯಾತ್ರೆಗಾಗಿ ಮೂರನೇ ತಂಡದ 4,812 ಮಂದಿ ಯಾತ್ರಿಕರು ಶನಿವಾರ ಮುಂಜಾನೆ ಜಮ್ಮುವಿನ ಭಗವತಿ ನಗರ ಯಾತ್ರಿನಿವಾಸದಿಂದ ಪವಿತ್ರ ಗುಹೆಯತ್ತ ಪ್ರಯಾಣ ಬೆಳೆಸಿದರು.

ಅಧಿಕೃತ ಮಾಹಿತಿಯ ಪ್ರಕಾರ, ಈ ತಂಡದಲ್ಲಿ 2,041 ಮಂದಿ ಬಾಲ್ತಾಲ್ ಮಾರ್ಗ ಹಾಗೂ 2,771 ಮಂದಿ ಪಹಲ್ಗಾಮ್ ಮಾರ್ಗ ಮೂಲಕ ಅಮರನಾಥ ಗುಹೆಯತ್ತ ತೆರಳುತ್ತಿದ್ದಾರೆ. ಒಟ್ಟು 259 ವಾಹನಗಳಲ್ಲಿ ಯಾತ್ರಿಕರನ್ನು ಕರೆದೊಯ್ಯಲಾಗಿದ್ದು, ಇದರಲ್ಲಿ 95 ಬಸ್‌ಗಳು, 47 ಮಧ್ಯಮ ಗಾತ್ರದ ವಾಹನಗಳು, 116 ಲಘು ವಾಹನಗಳು ಹಾಗೂ ಒಂದು ದ್ವಿಚಕ್ರ ವಾಹನ ಸೇರಿವೆ.

ಈ ತಂಡದಲ್ಲಿ 3,434 ಪುರುಷರು, 966 ಮಹಿಳೆಯರು, 11 ಮಕ್ಕಳು, 244 ಸಾಧುಗಳು ಹಾಗೂ 157 ಸಾಧ್ವಿಯರು ಇದ್ದಾರೆ. ಬಾಲ್ತಾಲ್ ಮಾರ್ಗದ ವಾಹನಗಳ ತಂಡ ಬೆಳಿಗ್ಗೆ ಸುಮಾರು 3 ಗಂಟೆಗೆ, ಪಹಲ್ಗಾಮ್ ಮಾರ್ಗದ ತಂಡ 3.24 ಗಂಟೆಗೆ ಬಹುಹಂತದ ಭದ್ರತಾ ವ್ಯವಸ್ಥೆಯ ನಡುವೆ ಪ್ರಯಾಣ ಆರಂಭಿಸಿತು.

ಇದರ ನಡುವೆ, ಎರಡನೇ ತಂಡದ ಯಾತ್ರಿಕರು ಬಾಲ್ತಾಲ್ ಹಾಗೂ ಪಹಲ್ಗಾಮ್‌ನ ನುನ್ವಾನ್ ಮೂಲ ಶಿಬಿರಗಳಿಂದ ಪವಿತ್ರ ಗುಹೆಯತ್ತ ಕಾಲ್ನಡಿಗೆಯ ಯಾತ್ರೆಯನ್ನು ಮುಂದುವರಿಸಿದ್ದಾರೆ. 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯಲ್ಲಿ ಸ್ವಯಂಭೂ ಹಿಮ ಶಿವಲಿಂಗದ ದರ್ಶನ ಪಡೆಯಲು ಸಾವಿರಾರು ಭಕ್ತರು ಭಕ್ತಿಭಾವದಿಂದ ಸಾಗುತ್ತಿದ್ದಾರೆ.

ಯಾತ್ರಿಕ ಕರಣ್ ಸಿಂಗ್ ಮಾತನಾಡಿ, ಸರ್ಕಾರ ಕೈಗೊಂಡಿರುವ ಬಿಗಿ ಭದ್ರತಾ ವ್ಯವಸ್ಥೆಯಿಂದ ಭಕ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಯಾವುದೇ ಭಯವಿಲ್ಲದೆ ಯಾತ್ರೆ ಮುಂದುವರಿಸಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಜುಲೈ 2ರಂದು ಮೊದಲ ತಂಡಕ್ಕೆ ಉಪರಾಜ್ಯಪಾಲರು ಹಸಿರು ನಿಶಾನೆ ತೋರಿದ ಬಳಿಕ ಇದುವರೆಗೆ ಒಟ್ಟು 13,499 ಮಂದಿ ಭಕ್ತರು ಜಮ್ಮುವಿನಿಂದ ಅಮರನಾಥ ಯಾತ್ರೆಗೆ ಹೊರಟಿದ್ದಾರೆ.

ಒಟ್ಟು 57 ದಿನಗಳ ಕಾಲ ನಡೆಯಲಿರುವ ಈ ವರ್ಷದ ಅಮರನಾಥ ಯಾತ್ರೆ ಜುಲೈ 3ರಂದು ಆರಂಭಗೊಂಡಿದ್ದು, ಆಗಸ್ಟ್ 28ರಂದು ರಕ್ಷಾ ಬಂಧನದ ದಿನ ಸಮಾಪ್ತಿಗೊಳ್ಳಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande