ನಕಲಿ ವೆಬ್ಸೈಟ್ಗಳ ವಿರುದ್ಧ ಭಾರತದ ಕಠಿಣ ಕ್ರಮಕ್ಕೆ ಗೊಡ್ಯಾಡಿ ಆಕ್ಷೇಪ
ನವದೆಹಲಿ, 04 ಜುಲೈ (ಹಿ.ಸ.): ಆ್ಯಂಕರ್:ನಕಲಿ ವೆಬ್‌ಸೈಟ್‌ಗಳು ಹಾಗೂ ಸೈಬರ್ ವಂಚನೆ ವಿರುದ್ಧ ಭಾರತ ಕೈಗೊಂಡಿರುವ ಕಠಿಣ ಕ್ರಮವನ್ನು ಜಗತ್ತಿನ ಅತಿದೊಡ್ಡ ಡೊಮೇನ್ ನೋಂದಣಿ ಸಂಸ್ಥೆಗಳಲ್ಲಿ ಒಂದಾದ ಗೊಡ್ಯಾಡಿ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ನ್ಯಾಯಾಲಯದ ಹೊಸ ನಿರ್ದೇಶನಗಳು ಜಾರಿಗೆ ಬಂದರೆ ಇಂಟರ್
ನಕಲಿ ವೆಬ್ಸೈಟ್ಗಳ ವಿರುದ್ಧ ಭಾರತದ ಕಠಿಣ ಕ್ರಮಕ್ಕೆ ಗೊಡ್ಯಾಡಿ ಆಕ್ಷೇಪ


ನವದೆಹಲಿ, 04 ಜುಲೈ (ಹಿ.ಸ.):

ಆ್ಯಂಕರ್:ನಕಲಿ ವೆಬ್‌ಸೈಟ್‌ಗಳು ಹಾಗೂ ಸೈಬರ್ ವಂಚನೆ ವಿರುದ್ಧ ಭಾರತ ಕೈಗೊಂಡಿರುವ ಕಠಿಣ ಕ್ರಮವನ್ನು ಜಗತ್ತಿನ ಅತಿದೊಡ್ಡ ಡೊಮೇನ್ ನೋಂದಣಿ ಸಂಸ್ಥೆಗಳಲ್ಲಿ ಒಂದಾದ ಗೊಡ್ಯಾಡಿ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ನ್ಯಾಯಾಲಯದ ಹೊಸ ನಿರ್ದೇಶನಗಳು ಜಾರಿಗೆ ಬಂದರೆ ಇಂಟರ್‌ನೆಟ್ ಭದ್ರತೆ, ಬಳಕೆದಾರರ ಗೌಪ್ಯತೆ ಹಾಗೂ ಕಾನೂನುಬದ್ಧ ಆನ್‌ಲೈನ್ ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಸಂಸ್ಥೆ ವಾದಿಸಿದೆ.

ಈ ಪ್ರಕರಣವು 2024ರ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಮಹತ್ವದ ಆದೇಶಕ್ಕೆ ಸಂಬಂಧಿಸಿದೆ. ಅಮೆಜಾನ್, ಮೆಕ್‌ಡೊನಾಲ್ಡ್ಸ್, ಮೈಕ್ರೋಸಾಫ್ಟ್, ಶಿಯೋಮಿ ಮತ್ತು ಕೋಲ್‌ಗೇಟ್-ಪಾಮೋಲಿವ್ ಸೇರಿದಂತೆ ಹಲವು ಕಂಪನಿಗಳ ದೂರಿನ ಮೇರೆಗೆ 1,100ಕ್ಕೂ ಹೆಚ್ಚು ನಕಲಿ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ನ್ಯಾಯಾಲಯ ಆದೇಶಿಸಿತ್ತು. ಅಲ್ಲದೆ ಡೊಮೇನ್ ನೋಂದಣಿ ಹಾಗೂ ಗುರುತು ಪರಿಶೀಲನೆಗೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುವಂತೆ ಸೂಚಿಸಿತ್ತು.

ನ್ಯಾಯಾಲಯದ ಆದೇಶದಂತೆ, ಡೊಮೇನ್ ನೋಂದಣಿ ಸಂಸ್ಥೆಗಳು ಇನ್ನು ಮುಂದೆ ಡೀಫಾಲ್ಟ್ ಆಗಿ ಉಚಿತ ಗೌಪ್ಯತಾ ರಕ್ಷಣೆ (ಪ್ರೈವಸಿ ಪ್ರೊಟೆಕ್ಷನ್) ಒದಗಿಸಬಾರದು. ಜೊತೆಗೆ, ನ್ಯಾಯಸಮ್ಮತ ಹಿತಾಸಕ್ತಿ ಹೊಂದಿರುವ ಅರ್ಜಿದಾರರಿಗೆ ಡೊಮೇನ್ ಮಾಲೀಕರ ಮಾಹಿತಿಯನ್ನು 72 ಗಂಟೆಗಳೊಳಗೆ ನೀಡಬೇಕು ಹಾಗೂ ಪ್ರಸಿದ್ಧ ಬ್ರ್ಯಾಂಡ್‌ಗಳ ಹೆಸರನ್ನು ಹೋಲುವ ಡೊಮೇನ್ ಹೆಸರುಗಳ ಮಾರಾಟವನ್ನು ತಡೆಯಬೇಕು ಎಂದು ನಿರ್ದೇಶಿಸಲಾಗಿದೆ.

ಈ ಆದೇಶವನ್ನು ಪ್ರಶ್ನಿಸಿರುವ ಗೊಡ್ಯಾಡಿ, ಇದರಿಂದ ವೆಬ್‌ಸೈಟ್ ಮಾಲೀಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ವಿಳಾಸದಂತಹ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುವ ಅಪಾಯವಿದೆ ಎಂದು ವಾದಿಸಿದೆ. ಇದರಿಂದ ಬಳಕೆದಾರರು ಕಿರುಕುಳ, ಹಿಂಬಾಲಿಕೆ (ಸ್ಟಾಕಿಂಗ್) ಹಾಗೂ ಸೈಬರ್ ದಾಳಿಗಳಂತಹ ಅಪಾಯಗಳನ್ನು ಎದುರಿಸಬೇಕಾಗಬಹುದು ಎಂದು ಸಂಸ್ಥೆ ತಿಳಿಸಿದೆ.

ಇದಲ್ಲದೆ, ನ್ಯಾಯಸಮ್ಮತ ಹಿತಾಸಕ್ತಿ ಎಂಬ ಪದಕ್ಕೆ ಸ್ಪಷ್ಟ ವ್ಯಾಖ್ಯಾನ ಇಲ್ಲದ ಕಾರಣ ಯಾರಿಗೆ ನೋಂದಣಿ ಮಾಹಿತಿ ನೀಡಬೇಕು ಎಂಬುದನ್ನು ನಿರ್ಧರಿಸುವುದು ಕಷ್ಟವಾಗಲಿದೆ ಎಂದು ಗೊಡ್ಯಾಡಿ ಹೇಳಿದೆ.

ಡೊಮೇನ್ ನೇಮ್ ಸಿಸ್ಟಮ್ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿರುವುದರಿಂದ, ಭಾರತದ ಈ ನಿಯಮಗಳು ವಿಶ್ವದಾದ್ಯಂತದ ಇಂಟರ್‌ನೆಟ್ ಸೇವೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಸಂಸ್ಥೆ ವಾದಿಸಿದೆ. ಈ ನಿಯಮಗಳು ಜಾರಿಯಾದರೆ ಕೆಲವು ಡೊಮೇನ್ ಸೇವಾ ಪೂರೈಕೆದಾರರು ಭಾರತದಲ್ಲಿನ ತಮ್ಮ ವ್ಯವಹಾರವನ್ನು ಸೀಮಿತಗೊಳಿಸುವ ಅಥವಾ ಸ್ಥಗಿತಗೊಳಿಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದೆ.

ಉಚಿತ ಗೌಪ್ಯತಾ ರಕ್ಷಣೆಯನ್ನು ತೆಗೆದುಹಾಕುವುದು ಭಾರತದ ಡೇಟಾ ಸಂರಕ್ಷಣಾ ಕಾನೂನು ಹಾಗೂ ಯುರೋಪಿಯನ್ ಒಕ್ಕೂಟದ ಜಿಡಿಪಿಆರ್ ಸೇರಿದಂತೆ ಅಂತರರಾಷ್ಟ್ರೀಯ ಗೌಪ್ಯತಾ ಮಾನದಂಡಗಳಿಗೂ ವಿರುದ್ಧವಾಗಿದೆ. ಇವುಗಳು ಡೀಫಾಲ್ಟ್ ಗೌಪ್ಯತೆ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ ಎಂದು ಗೊಡ್ಯಾಡಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಇನ್ನೊಂದೆಡೆ, ಕೇಂದ್ರ ಸರ್ಕಾರವು ನಕಲಿ ವೆಬ್‌ಸೈಟ್‌ಗಳು ಹಾಗೂ ಡೊಮೇನ್ ದುರುಪಯೋಗದಿಂದ ಸೈಬರ್ ಅಪರಾಧಗಳು ವೇಗವಾಗಿ ಹೆಚ್ಚುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ತನಿಖಾ ಸಂಸ್ಥೆಗಳಿಗೆ ಡೊಮೇನ್ ನೋಂದಣಿ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅವಕಾಶ ಇರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ವಾದಿಸಿದೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸೈಬರ್ ಅಪರಾಧವನ್ನು ದೇಶ ಎದುರಿಸುತ್ತಿರುವ ಗಂಭೀರ ಸವಾಲುಗಳಲ್ಲಿ ಒಂದೆಂದು ಹೇಳಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande