ಇಂಧನದಲ್ಲಿ ಎಥನಾಲ್ ಮಿಶ್ರಣ: ವಾಹನ ಸವಾರರ ಮೇಲೆ ಹೊರೆ: ಬಿ.ಕೆ. ಹರಿಪ್ರಸಾದ್
ಬೆಂಗಳೂರು, 04 ಜುಲೈ (ಹಿ.ಸ.): ಆ್ಯಂಕರ್:ಇಂಧನದಲ್ಲಿ ಶೇ.20ರಷ್ಟು ಎಥನಾಲ್‌ ಮಿಶ್ರಣ ಜಾರಿಯಾದ ಬಳಿಕ ದೇಶದಾದ್ಯಂತ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿದ್ದು, ಮೈಲೇಜ್‌ ಗಣನೀಯವಾಗಿ ಕುಸಿದಿರುವ ಬಗ್ಗೆ ವ್ಯಾಪಕ ವರದಿಗಳು ಬರುತ್ತಿವೆ. ಇದರಿಂದ ಲಕ್ಷಾಂತರ ವಾಹನ ಮಾಲೀಕರು ಹೆಚ್ಚಿನ ನಿರ್ವಹಣಾ ವೆ
ಬಿ.ಕೆ.ಹರಿಪ್ರಸಾದ


ಬೆಂಗಳೂರು, 04 ಜುಲೈ (ಹಿ.ಸ.):

ಆ್ಯಂಕರ್:ಇಂಧನದಲ್ಲಿ ಶೇ.20ರಷ್ಟು ಎಥನಾಲ್‌ ಮಿಶ್ರಣ ಜಾರಿಯಾದ ಬಳಿಕ ದೇಶದಾದ್ಯಂತ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿದ್ದು, ಮೈಲೇಜ್‌ ಗಣನೀಯವಾಗಿ ಕುಸಿದಿರುವ ಬಗ್ಗೆ ವ್ಯಾಪಕ ವರದಿಗಳು ಬರುತ್ತಿವೆ. ಇದರಿಂದ ಲಕ್ಷಾಂತರ ವಾಹನ ಮಾಲೀಕರು ಹೆಚ್ಚಿನ ನಿರ್ವಹಣಾ ವೆಚ್ಚವನ್ನು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಇಂಧನದ ಬೆಲೆಯನ್ನು ಕಡಿಮೆ ಮಾಡುವ ಬದಲು ಕೇಂದ್ರದ ಸರ್ಕಾರ ಎಥನಾಲ್‌ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸಿ ಅದರ ವೆಚ್ಚವನ್ನು ಸಾಮಾನ್ಯ ಜನರ ಮೇಲೆಯೇ ಹೊರಿಸಿದೆ ಎಂದು ಅವರು ಟೀಕಿಸಿದ್ದಾರೆ.

ಜನರು ಹಿಂದಿನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಬೆಲೆಗೆ ಇಂಧನ ಖರೀದಿಸುತ್ತಿದ್ದರೂ ಕಡಿಮೆ ಮೈಲೇಜ್‌ ಸಿಗುತ್ತಿದೆ. ಜೊತೆಗೆ ವಾಹನಗಳ ದುರಸ್ತಿ ವೆಚ್ಚವೂ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಉತ್ತರಿಸಬೇಕಾದ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಇದು ದೊಡ್ಡ ಹಗರಣ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.

ಎಥನಾಲ್‌ ಮಿಶ್ರಣದ ಈ ಪ್ರಯೋಗವು ಪಾರದರ್ಶಕತೆ, ವೈಜ್ಞಾನಿಕ ಸಾಕ್ಷ್ಯಗಳು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಆಧರಿಸಿರಬೇಕು. ಕೋಟ್ಯಂತರ ವಾಹನ ಸವಾರರ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ನೀತಿಗಳನ್ನು ಜಾರಿಗೊಳಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಇಂಧನದಲ್ಲಿ ಶೇ.20 ಎಥನಾಲ್‌ ಮಿಶ್ರಣ ಜಾರಿಯಾದರೂ ಪೆಟ್ರೋಲ್‌ ದರ ಏಕೆ ಕಡಿಮೆಯಾಗಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಜೊತೆಗೆ ವಾಹನ ಬಳಕೆದಾರರು ವ್ಯಕ್ತಪಡಿಸುತ್ತಿರುವ ಮೈಲೇಜ್‌ ಕುಸಿತ ಮತ್ತು ವಾಹನ ದೋಷಗಳ ಕುರಿತ ಆತಂಕಗಳಿಗೆ ಸಮರ್ಪಕ ಉತ್ತರ ನೀಡಬೇಕು ಎಂದು ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande