ಕೃಷ್ಣಾ ನದಿಯಿಂದ ಮೇಲಕ್ಕೆತ್ತಿದ ಟಿಪ್ಪರ್ನಲ್ಲೇ ಚಾಲಕನ ಮೃತದೇಹ ಪತ್ತೆ – ಮೂರು ದಿನಗಳ ಶೋಧ ಕಾರ್ಯ ಅಂತ್ಯ
ವಿಜಯಪುರ, 04 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಕೊರ್ತಿ–ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಉರುಳಿದ್ದ ಟಿಪ್ಪರ್ನ ಚಾಲಕನಿಗಾಗಿ ಕಳೆದ ಮೂರು ದಿನಗಳಿಂದ ನಡೆದ ತೀವ್ರ ಶೋಧ ಕಾರ್ಯಕ್ಕೆ ಕೊನೆಗೂ ಅಂತ್ಯ ಕಂಡಿದೆ. ಕ್ರೇನ್ ಸಹಾಯದಿಂದ ಟಿಪ್ಪರ್ ಅನ್ನು ನದಿಯಿಂದ ಮೇಲಕ್ಕೆತ್ತಿದ ವೇಳೆ, ಅದರ
ಪತ್ತೆ


ವಿಜಯಪುರ, 04 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಕೊರ್ತಿ–ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಉರುಳಿದ್ದ ಟಿಪ್ಪರ್ನ ಚಾಲಕನಿಗಾಗಿ ಕಳೆದ ಮೂರು ದಿನಗಳಿಂದ ನಡೆದ ತೀವ್ರ ಶೋಧ ಕಾರ್ಯಕ್ಕೆ ಕೊನೆಗೂ ಅಂತ್ಯ ಕಂಡಿದೆ.

ಕ್ರೇನ್ ಸಹಾಯದಿಂದ ಟಿಪ್ಪರ್ ಅನ್ನು ನದಿಯಿಂದ ಮೇಲಕ್ಕೆತ್ತಿದ ವೇಳೆ, ಅದರೊಳಗೆಯೇ ಸಿಲುಕಿದ್ದ ಚಾಲಕ ಸಂತೋಷ ಕೋಟಿ ಅವರ ಮೃತದೇಹ ಪತ್ತೆಯಾಗಿದೆ.

ಟಿಪ್ಪರ್ ನದಿಗೆ ಉರುಳಿದ ದುರ್ಘಟನೆ ನಡೆದ ದಿನವೇ ಅದರಲ್ಲಿದ್ದ ಕ್ಲೀನರ್ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಚಾಲಕ ಸಂತೋಷ ಕೋಟಿ ಅವರ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಸ್ಥಳೀಯ ಆಡಳಿತ ಹಾಗೂ ಪೊಲೀಸರು ಕಳೆದ ಮೂರು ದಿನಗಳಿಂದ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದರು.

ನದಿಯ ತೀವ್ರ ಆಳ, ನೀರಿನ ಹರಿವು ಹಾಗೂ ಮಣ್ಣಿನ ಪದರಗಳಿಂದ ಶೋಧ ಕಾರ್ಯಕ್ಕೆ ಸಾಕಷ್ಟು ಅಡಚಣೆಗಳು ಎದುರಾದರೂ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದರು. ಕೊನೆಗೆ ಭಾರೀ ಸಾಮರ್ಥ್ಯದ ಕ್ರೇನ್ ಮೂಲಕ ಟಿಪ್ಪರ್ ಅನ್ನು ಮೇಲಕ್ಕೆತ್ತಿದಾಗ, ಅದರ ಕ್ಯಾಬಿನ್ ಒಳಗಡೆಯೇ ಸಿಲುಕಿದ್ದ ಚಾಲಕನ ಮೃತದೇಹ ಪತ್ತೆಯಾಯಿತು.

ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಈ ದುರಂತದಿಂದ ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಟಿಪ್ಪರ್ ನದಿಗೆ ಉರುಳಲು ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ. ರಸ್ತೆ ಸುರಕ್ಷತೆ ಹಾಗೂ ಸೇತುವೆಗಳಲ್ಲಿ ವಾಹನ ಚಾಲನೆ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಈ ದುರ್ಘಟನೆ ಮತ್ತೊಮ್ಮೆ ನೆನಪಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande