
ರಾಯಚೂರು, 03 ಜುಲೈ (ಹಿ.ಸ.)
ಆ್ಯಂಕರ್: ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟಿಯ ಆರೋಗ್ಯ ಅಭಿಯಾನದಡಿ ಜಿಲ್ಲಾ ವಿಬಿಡಿಸಿ ಕಾರ್ಯಕ್ರಮಗಳಲ್ಲಿ 2026-27ನೇ ಸಾಲಿಗೆ ಮಂಜೂರಾದ 30 ಸ್ವಯಂ ಸೇವಕರ ಸೇವೆಯನ್ನು ಪಡೆಯಲು ಆಸಕ್ತರಿಂದ ವಾಕ್-ಇನ್ ಸಂದರ್ಶನದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ರಾಯಚೂರು-11, ಸಿಂಧನೂರು-4, ಮಾನ್ವಿ-4, ಲಿಂಸಗ್ಗೂರು-7 ಹಾಗೂ ದೇವದುರ್ಗ-4 ಸ್ವಯಂ ಸೇವಕರ ಸೇವೆಯನ್ನು ಹಂಚಿಕೆ ಮಾಡಲಾಗಿದೆ. 100 ದಿನಗಳಿಗೆ ಮಾತ್ರ ಒಪ್ಪಂದದ ಅವಧಿ ಇರುತ್ತದೆ. ಡೆಂಗಿ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಈಡಿಸ್ ಲಾರ್ವಾ ಉತ್ಪತ್ತಿ ತಾಣ ಚಟುವಟಿಕೆಯನ್ನು ನಗರ/ಪಟ್ಟಣ ಪ್ರದೇಶಗಳ ಡೆಂಗಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೈಗೊಳ್ಳಲು 30 ಸ್ವಯಂ ಸೇವಕರ ಸೇವೆಯನ್ನು ಬಳಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.
ಈ ಚಟುವಟಿಕೆಯಲ್ಲಿ ಭಾಗವಹಿಸುವ ಸ್ವಯಂ ಸೇವಕರು ಕನಿಷ್ಠ ಎಸ್ಎಸ್ಎಲ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಚಟುವಟಿಕೆಯ ನಮೂನೆಯನ್ನು ಭರ್ತಿ ಮಾಡಲು ಶಕ್ತರಾಗಿರಬೇಕು. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ದೈನಂದಿನ ಕ್ರಿಯಾ ಯೋಜನೆಯ ಅನ್ವಯ ನಿಗದಿತ ವೆಳಾಪಟ್ಟಿಯಂತೆ ಚಟುವಟಿಕೆಗೆ ತಪ್ಪದೇ ಹಾಜರಾಗಬೇಕು. ಚಟುವಟಿಕೆಗೆ ಅಗತ್ಯವಿರುವ ವರದಿ ನಮೂನೆಗಳು & ಲಾರ್ವಾನಾಶಕ ದ್ರಾವಣ ಇತ್ಯಾದಿಗಳ ಸಮೇತ ಚಟುವಟಿಕೆಯಲ್ಲಿ ಭಾಗವಹಿಸಬೇಕು. ದಿನ ಒಂದಕ್ಕೆ ಕನಿಷ್ಠ 60 - 65 ಅವರಣಗಳು ಅಂದರೆ ಮನೆಗಳು, ಕಚೇರಿ, ಆಸ್ಪತ್ರೆ, ಶಾಲೆ, ಕಾಲೇಜು. ವಾಣಿಜ್ಯ ಸಂಕೀರ್ಣಗಳು, ಸಿನೆಮಾ ಹಾಲ್ ಹಾಗೂ ಇತ್ಯಾದಿಗಳಲ್ಲಿ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳ ನಾಶ ಮಾಡುವ ಚಟುವಟಿಕೆಯನ್ನು ಕೈಗೊಳ್ಳಬೇಕು.
ಆಸಕ್ತರು ಜುಲೈ 09ರ ಬೆಳಿಗ್ಗೆ 10ಗಂಟೆಗೆ ರಾಯಚೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಾರ್ಯಾಲಯಕ್ಕೆ ತಮ್ಮ ಸ್ವವಿವರದೊಂದಿಗೆ ವಿದ್ಯಾಭ್ಯಾಸದ ಪ್ರಮಾಣ ಪತ್ರ ಹಾಗೂ ಅನುಭವ ಪ್ರಮಾಣ ಪತ್ರ ಮತ್ತು ಇತರೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳಿಗೆ ಗೆಜಿಟೆಡ್ ಅಧಿಕಾಗಳಿಂದ ಧೃಡಿಕೃರಿಸಿ ಸಂದರ್ಶನಕ್ಕೆ ಹಾಜರಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್