ಕೃಷ್ಣಾ ನದಿಗೆ ಬಿದ್ದಿದ್ದ ಟಿಪ್ಪರ್ ಯಶಸ್ವಿಯಾಗಿ ಮೇಲಕ್ಕೆ; ಕಾರ್ಯಾಚರಣೆ ವೇಳೆ ಸಂಚಾರ ಸ್ಥಗಿತ, ವಾಹನ ಸವಾರರ ಪರದಾಟ
ವಿಜಯಪುರ, 03 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಕೊರ್ತಿ-ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಉರುಳಿಬಿದ್ದಿದ್ದ ಟಿಪ್ಪರ್ ಅನ್ನು ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಭಾರೀ ಸಾಮರ್ಥ್ಯದ ಕ್ರೇನ್ಗಳ ನೆರವಿನಿಂದ ಶುಕ್ರವಾರ ಯಶಸ್ವಿಯಾಗಿ ಮೇಲಕ್ಕೆ ಎತ್ತಲಾಯಿತು. ರಕ್ಷಣಾ ಕಾರ್ಯಾಚರಣೆ ವೇಳೆ
ರಿವರ್


ಟ್ರಾಫಿಕ್


ವಿಜಯಪುರ, 03 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಕೊರ್ತಿ-ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಉರುಳಿಬಿದ್ದಿದ್ದ ಟಿಪ್ಪರ್ ಅನ್ನು ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಭಾರೀ ಸಾಮರ್ಥ್ಯದ ಕ್ರೇನ್ಗಳ ನೆರವಿನಿಂದ ಶುಕ್ರವಾರ ಯಶಸ್ವಿಯಾಗಿ ಮೇಲಕ್ಕೆ ಎತ್ತಲಾಯಿತು.

ರಕ್ಷಣಾ ಕಾರ್ಯಾಚರಣೆ ವೇಳೆ ಸೇತುವೆಯ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ಎರಡೂ ಬದಿಗಳಲ್ಲಿ ವಾಹನಗಳ ಸಾಲು ನಿರ್ಮಾಣವಾಗಿ ಪ್ರಯಾಣಿಕರು ಮತ್ತು ವಾಹನ ಸವಾರರು ಸಾಕಷ್ಟು ಪರದಾಡುವಂತಾಯಿತು.

ಕೆಲ ದಿನಗಳ ಹಿಂದೆ ಸೇತುವೆ ಮೇಲೆ ಸಂಭವಿಸಿದ್ದ ಅಪಘಾತದಲ್ಲಿ ಟಿಪ್ಪರ್ ನದಿಗೆ ಉರುಳಿಬಿದ್ದಿತ್ತು. ನಂತರ ಅದನ್ನು ಮೇಲಕ್ಕೆತ್ತಲು ಹಲವು ಬಾರಿ ಪ್ರಯತ್ನಿಸಿದರೂ ನೀರಿನ ಹರಿವು, ವಾಹನದ ತೂಕ ಹಾಗೂ ತಾಂತ್ರಿಕ ಅಡಚಣೆಗಳಿಂದ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ.

ಅಂತಿಮವಾಗಿ ತಜ್ಞರ ಮಾರ್ಗದರ್ಶನದಲ್ಲಿ ಭಾರೀ ಕ್ರೇನ್ಗಳನ್ನು ಬಳಸಿ ನಡೆಸಿದ ಕಾರ್ಯಾಚರಣೆಯಲ್ಲಿ ಟಿಪ್ಪರ್ ಅನ್ನು ಸುರಕ್ಷಿತವಾಗಿ ನದಿಯಿಂದ ಹೊರತೆಗೆದುಕೊಳ್ಳಲಾಯಿತು.

ಕಾರ್ಯಾಚರಣೆಯ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ಸಂಚಾರವನ್ನು ಕೆಲಕಾಲ ಸಂಪೂರ್ಣ ಬಂದ್ ಮಾಡಲಾಗಿತ್ತು.

ಸಂಚಾರ ಸ್ಥಗಿತಗೊಂಡ ಪರಿಣಾಮ ಸೇತುವೆಯ ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಕೆಲಸಕ್ಕೆ ತೆರಳುತ್ತಿದ್ದವರು, ವಿದ್ಯಾರ್ಥಿಗಳು ಹಾಗೂ ಇತರೆ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರು. ಕಾರ್ಯಾಚರಣೆ ಪೂರ್ಣಗೊಂಡ ನಂತರ ಅಧಿಕಾರಿಗಳು ಸಂಚಾರವನ್ನು ಪುನಃ ಆರಂಭಿಸಿದರು.

ಸ್ಥಳೀಯರು ರಕ್ಷಣಾ ತಂಡಗಳ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೇತುವೆಯಲ್ಲಿ ಅಪಘಾತಗಳು ಮರುಕಳಿಸದಂತೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande