
ಬಳ್ಳಾರಿ, 03 ಜುಲೈ (ಹಿ.ಸ.)
ಆ್ಯಂಕರ್: ಸಂಗನಕಲ್ಲು ಗ್ರಾಮದ ಸಂಗಮೇಶ್ವರ ಶಾಲೆ ಹತ್ತಿರದ ನಿವಾಸಿಯಾದ ಗುರುರಾಜ್ ರಾವ್. ಬಿ (60) ಜೂನ್ 22 ರಂದು ಹಪ್ಪಳ ಮಾರಿಕೊಂಡು ಬರುವುದಾಗಿ ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತರ 6.2 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು, ಕಪ್ಪು ಮತ್ತು ಬಿಳಿ ಕೂದಲು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಗೀರುಗಳುಳ್ಳ ಬಣ್ಣದ ತುಂಬು ತೋಳಿನ ಬಿಳಿ ಬಣ್ಣದ ಅಂಗಿ ಮತ್ತು ಪಾಚಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕಿವುಡ ಮತ್ತು ಮೂಗನಾಗಿರುತ್ತಾನೆ.
ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯ ಆದಲ್ಲಿ ತಕ್ಷಣವೇ ಬಳ್ಳಾರಿ ಗ್ರಾಮೀಣ ಪೋಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಪೋಲೀಸ್ ಕಂಟ್ರೋಲ್ ರೂಂ ದೂ.08392258100 ಗೆ ಸಂಪರ್ಕಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್