
ಬಳ್ಳಾರಿ, 03 ಜುಲೈ (ಹಿ.ಸ.)
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11 ಕೆವಿ ಅಲ್ಲಿಪುರ ವಿದ್ಯುತ್ ವಿತರಣಾ ಕೇಂದ್ರದ ಬ್ಯಾಂಕ್-1 ನಿಂದ ವಿದ್ಯುತ್ ಸರಬರಾಜು ಆಗುವ ಎಫ್-72ರ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿ0ದ ಜುಲೈ 05 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ನಗರದ ಕಾಂಟೋನ್ ಮೆಂಟ್, ಸೂರ್ಯ ಕಾಲೋನಿ, ತಿಲಕ್ ನಗರ, ಸುಧಾ ಕ್ರಾಸ್, ನಂದಿ ಕಾಲೋನಿ, ಹೆಚ್.ಆರ್.ಜಿ ಕಾಲೋನಿ, ಜಯ ನಗರ, ರಹಿಮಬಾದ್ ಕಾಲೋನಿ, ನಲಂದ ಕಾಲೇಜು, ವಿಜಯನಗರ ಕಾಲೋನಿ, ಕೆ.ಹೆಚ್.ಬಿ ಕಾಲೋನಿ, ಜಗನಾಥ ಮಂದಿರ, ಭಾಸ್ಕರ ನಾಯ್ಡು ಸ್ಟ್ರಿಟ್, ಸೆಂಟ್ ಜೋಸೆಫ್ ಸ್ಕೂಲ್, ಬೆಳಗಲ್ ಕ್ರಾಸ್, ಚಂದ್ರ ಕಾಲೋನಿ, ಎಂ.ಕೆ ಗಡಂಗ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್