ಎಸ್ಐಆರ್: ಕೊಪ್ಪಳ ಮೂರು ದಿನಗಳಲ್ಲಿ 6,18,909 ಅರ್ಜಿ ನಮೂನೆ ವಿತರಣೆ
ಕೊಪ್ಪಳ, 03 ಜುಲೈ (ಹಿ.ಸ.) ಆ್ಯಂಕರ್: ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಮನೆಮನೆ ಭೇಟಿ ಮುಂದುವರೆದಿದ್ದು, ಜೂನ್ 30 ರಿಂದ ಜುಲೈ 2 ರ ಸಂಜೆ 06 ಗಂಟೆಯವರೆಗೆ ಒಟ್ಟು 6,18,909 ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಚು
ಎಸ್ಐಆರ್: ಕೊಪ್ಪಳ ಮೂರು ದಿನಗಳಲ್ಲಿ 6,18,909 ಅರ್ಜಿ ನಮೂನೆ ವಿತರಣೆ


ಕೊಪ್ಪಳ, 03 ಜುಲೈ (ಹಿ.ಸ.)

ಆ್ಯಂಕರ್: ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಮನೆಮನೆ ಭೇಟಿ ಮುಂದುವರೆದಿದ್ದು, ಜೂನ್ 30 ರಿಂದ ಜುಲೈ 2 ರ ಸಂಜೆ 06 ಗಂಟೆಯವರೆಗೆ ಒಟ್ಟು 6,18,909 ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಜೂನ್ 30 ರಂದು 1315 ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳನ್ನು ವಿತರಿಸುವ ಸಲುವಾಗಿ ಮನೆ ಮನೆ ಭೇಟಿ ಕಾರ್ಯವನ್ನು ಆರಂಭಿಸಿದ್ದು, ಮನೆ ಭೇಟಿ ಸಂದರ್ಭದಲ್ಲಿ ಜಿಲ್ಲೆಯ ಸಾರ್ವಜನಿಕರು ಸಹಕಾರ ನೀಡಿ ಬೂತ್ ಮಟ್ಟದ ಅಧಿಕಾರಿಗಳು ಕೋರುವ ಮಾಹಿತಿಯನ್ನು ಒದಗಿಸಬೇಕು.

ಗಣತಿ ನಮೂನೆಗಳನ್ನು ಹಂಚಿಕೆ ಮಾಡಲು ಹಾಗೂ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಂಗ್ರಹಿಸಲು ಜುಲೈ 29 ರವರೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande