ವಿಜಯಪುರಕ್ಕೆ ಖುಷ್ಬೂ ಗೋಯಲ್ ಚೌಧರಿ ಭೇಟಿ: ಶಿಶುಪಾಲನಾ ಕೇಂದ್ರ, ಪೌಷ್ಟಿಕ ಕೈತೋಟ ವೀಕ್ಷಿಸಿ ಮೆಚ್ಚುಗೆ
ವಿಜಯಪುರ, 03 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲಾ ಪಂಚಾಯತಿಗೆ ಇಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಾದ ಖುಷ್ಬೂ ಗೋಯಲ್ ಚೌಧರಿ ಅವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಿ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು. ಭೇಟಿಯ ವೇಳೆ ಅವರು ಜಿಲ್
ಭೇಟಿ


ವಿಜಯಪುರ, 03 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲಾ ಪಂಚಾಯತಿಗೆ ಇಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಾದ ಖುಷ್ಬೂ ಗೋಯಲ್ ಚೌಧರಿ ಅವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಿ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.

ಭೇಟಿಯ ವೇಳೆ ಅವರು ಜಿಲ್ಲಾ ಪಂಚಾಯತಿಯ ಶಿಶುಪಾಲನಾ ಕೇಂದ್ರ, ಪೌಷ್ಟಿಕ ಕೈತೋಟ ಹಾಗೂ ಜಿಲ್ಲಾ ಪಂಚಾಯತಿ ಆವರಣದಲ್ಲಿರುವ ಉದ್ಯಾನವನವನ್ನು ಪರಿಶೀಲಿಸಿದರು.

ಶಿಶುಗಳ ಆರೈಕೆಗಾಗಿ ಕೈಗೊಂಡಿರುವ ವ್ಯವಸ್ಥೆಗಳು, ಪೌಷ್ಟಿಕ ಕೈತೋಟದ ಮೂಲಕ ಪೌಷ್ಟಿಕ ಆಹಾರ ಉತ್ಪಾದನೆಗೆ ನೀಡಿರುವ ಆದ್ಯತೆ ಹಾಗೂ ಕಚೇರಿ ಆವರಣದ ಹಸಿರು ಮತ್ತು ಸ್ವಚ್ಛ ವಾತಾವರಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತಿಯ ಶಿಶುಪಾಲನಾ ಕೇಂದ್ರದ ನಿರ್ವಹಣೆ ಮಾದರಿಯಾಗಿದ್ದು, ಸಿಬ್ಬಂದಿಯ ಶ್ರಮ ಮತ್ತು ಕಾಳಜಿಯಿಂದ ಉತ್ತಮ ವಾತಾವರಣ ನಿರ್ಮಾಣಗೊಂಡಿದೆ ಎಂದು ಅವರು ಪ್ರಶಂಸಿಸಿದರು. ಅಲ್ಲದೆ, ಕಚೇರಿ ಆವರಣದ ಸ್ವಚ್ಛತೆ, ಹಸಿರು ಪರಿಸರ ಮತ್ತು ಉದ್ಯಾನವನದ ನಿರ್ವಹಣೆ ಸರ್ಕಾರಿ ಕಚೇರಿಗಳಿಗೂ ಮಾದರಿಯಾಗುವಂತಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಿಷಿ ಆನಂದ್ ಅವರು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಶಿಶು ಕಲ್ಯಾಣ ಯೋಜನೆಗಳು ಹಾಗೂ ಪರಿಸರ ಸ್ನೇಹಿ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು.

ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ ಖುಷ್ಬೂ ಗೋಯಲ್ ಚೌಧರಿ ಅವರು ಸಾರ್ವಜನಿಕ ಸೇವೆಗಳಲ್ಲಿ ಗುಣಮಟ್ಟ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಭೇಟಿಯ ವೇಳೆ ಪ್ರೊಬೇಷನರಿ ಐಎಎಸ್ ಅಧಿಕಾರಿಗಳಾದ ಅಭಿಷೇಕ ಸಹೆರಾ, ಮುಖ್ಯ ಯೋಜನಾಧಿಕಾರಿಗಳಾದ ಸಿ.ಬಿ. ಕುಂಬಾರ, ಯೋಜನಾ ನಿರ್ದೇಶಕರಾದ ಅಶೋಕ ಕಲಘಟಗಿ ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತಿಯ ಶಿಶುಪಾಲನಾ ಕೇಂದ್ರ, ಪೌಷ್ಟಿಕ ಕೈತೋಟ ಮತ್ತು ಉದ್ಯಾನವನದ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶ್ಲಾಘಿಸಿದ್ದು, ಸರ್ಕಾರಿ ಸಂಸ್ಥೆಗಳಲ್ಲಿ ಸ್ವಚ್ಛತೆ, ಹಸಿರು ಪರಿಸರ ಹಾಗೂ ಮಕ್ಕಳ ಸ್ನೇಹಿ ಸೌಲಭ್ಯಗಳ ಮಹತ್ವವನ್ನು ಈ ಭೇಟಿ ಮತ್ತೊಮ್ಮೆ ಒತ್ತಿ ಹೇಳಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande