ಎಸ್ ಐ ಆರ್ ಪರಿಷ್ಕರಣೆಯಲ್ಲಿ ಎಲ್ಲರೂ ಭಾಗವಹಿಸಿ- ಎನ್ಎಸ್ ಬೋಸರಾಜು
ರಾಯಚೂರು, 03 ಜುಲೈ (ಹಿ.ಸ.) ಆ್ಯಂಕರ್: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಅಭಿಯಾನದ ಅಂಗವಾಗಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರ ನಿವಾಸಕ್ಕೆ ಸಮೀಕ್ಷೆಗೆ ಬಂದ ಅಧಿಕಾರಿಗಳಿಗೆ ಸ್ವ ವಿವರದ ಮಾಹಿತಿ ನೀಡುವ ಮೂಲಕ ಎಸ್ಐಆರ್ ಫಾರಂ ಭರ್ತಿ ಮಾಡಿ ತಮ್ಮ ಮಾ
ಎಸ್ ಐ ಆರ್ ಪರಿಷ್ಕರಣೆಯಲ್ಲಿ ಎಲ್ಲರೂ ಭಾಗವಹಿಸಿ- ಎನ್ಎಸ್ ಬೋಸರಾಜು


ಎಸ್ ಐ ಆರ್ ಪರಿಷ್ಕರಣೆಯಲ್ಲಿ ಎಲ್ಲರೂ ಭಾಗವಹಿಸಿ- ಎನ್ಎಸ್ ಬೋಸರಾಜು


ಎಸ್ ಐ ಆರ್ ಪರಿಷ್ಕರಣೆಯಲ್ಲಿ ಎಲ್ಲರೂ ಭಾಗವಹಿಸಿ- ಎನ್ಎಸ್ ಬೋಸರಾಜು


ರಾಯಚೂರು, 03 ಜುಲೈ (ಹಿ.ಸ.)

ಆ್ಯಂಕರ್: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಅಭಿಯಾನದ ಅಂಗವಾಗಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರ ನಿವಾಸಕ್ಕೆ ಸಮೀಕ್ಷೆಗೆ ಬಂದ ಅಧಿಕಾರಿಗಳಿಗೆ ಸ್ವ ವಿವರದ ಮಾಹಿತಿ ನೀಡುವ ಮೂಲಕ ಎಸ್ಐಆರ್ ಫಾರಂ ಭರ್ತಿ ಮಾಡಿ ತಮ್ಮ ಮಾಹಿತಿಯನ್ನು ಸಲ್ಲಿಸಿದರು.

ನಂತರ ಮಾತನಾಡಿದ ಎನ್ ಎಸ್ ಬೋಸರಾಜು ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಸಮಿಕ್ಷೆಗೆ ಬಂದ ಅಧಿಕಾರಿಗಳಿಗೆ ಒದಗಿಸಬೇಕು, ಸಮೀಕ್ಷೆಯಲ್ಲಿ ಯಾರನ್ನು ಕೈಬಿಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತವಾಗಿಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಎಸ್ಐಆರ್ ಅಭಿಯಾನಕ್ಕೆ ಸಾರ್ವಜನಿಕರು ಸಹಕರಿಸಬೇಕು. ಹೊಸ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ಈಗಾಗಲೇ ಮತದಾರರ ಪಟ್ಟಿಯಲ್ಲಿರುವವರು ತಮ್ಮ ವಿವರಗಳನ್ನು ಪರಿಶೀಲಿಸಿ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande