ರಾಯಚೂರು : ವಿದ್ಯುತ್ ಕಳ್ಳತನ, ಸೋರಿಕೆ : ಜೆಸ್ಕಾಂ 10,40,549 ರೂ. ದಂಡ
ರಾಯಚೂರು, 03 ಜುಲೈ (ಹಿ.ಸ.) ಆ್ಯಂಕರ್: ರಾಯಚೂರು ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಬರುವ ರಾಯಚೂರು ನಗರ ಉಪ ವಿಭಾಗ, ಗಧಾರ್, ಸಿಂಗನೋಡಿ, ತಲಮಾರಿ, ಮಾನವಿ ನಗರ, ಕೋರವಿ, ಚಿಕ್ಕಬೂದೂರು, ಜೇರಬಂಡಿ, ಕೊಪ್ಪರ, ಎನ್.ಗಣೇಕಲ್, ಸಿರವಾರ ಕ್ರಾಸ್, ಯತ್ಗಲ್, ಅರಳಹಳ್ಳಿ, ಕುರುಕುಂದ, ಗೌಡೂರು, ಗೌಡೂರು ತಾಂಡ,
ರಾಯಚೂರು : ವಿದ್ಯುತ್ ಕಳ್ಳತನ, ಸೋರಿಕೆ : ಜೆಸ್ಕಾಂ 10,40,549 ರೂ. ದಂಡ


ರಾಯಚೂರು, 03 ಜುಲೈ (ಹಿ.ಸ.)

ಆ್ಯಂಕರ್: ರಾಯಚೂರು ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಬರುವ ರಾಯಚೂರು ನಗರ ಉಪ ವಿಭಾಗ, ಗಧಾರ್, ಸಿಂಗನೋಡಿ, ತಲಮಾರಿ, ಮಾನವಿ ನಗರ, ಕೋರವಿ, ಚಿಕ್ಕಬೂದೂರು, ಜೇರಬಂಡಿ, ಕೊಪ್ಪರ, ಎನ್.ಗಣೇಕಲ್, ಸಿರವಾರ ಕ್ರಾಸ್, ಯತ್ಗಲ್, ಅರಳಹಳ್ಳಿ, ಕುರುಕುಂದ, ಗೌಡೂರು, ಗೌಡೂರು ತಾಂಡ, ಯರಡೋಣಿ ಕ್ರಾಸ್, ಹೆಡಗಿಬಾಕ್ ಕ್ಯಾಂಪ್ನ ಗ್ರಾಹಕರಿಗೆ 2026ಡಿ ಜೂನ್ ಮಾಹೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ), ಜಾಗೃತದಳ ಜೆಸ್ಕಾಂ ರಾಯಚೂರು ಇವರು ದಾಳಿ ಮಾಡಿ ವಿದ್ಯುತ್ ಕಳ್ಳತನ, ಸೋರಿಕೆ ಹಾಗೂ ದುರಪಯೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು ಮೊತ್ತ 10,40,549 ರೂ.ಗಳನ್ನು ದಂಡ ವಿಧಿಸಿರುತ್ತಾರೆ.

ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಅಧಿಕೃತಗೊಳಿಸಿಕೊಳ್ಳಲು ಹಾಗೂ ವಿದ್ಯುತ್ ನಿಲುಗಡೆಯಿಂದ ತಪ್ಪಿಸಲು ಬಾಕಿ ಇರುವ ವಿದ್ಯುತ್ ಬಿಲ್ ಮೊತ್ತವನ್ನು ಪಾವತಿಸುವಂತೆ ಗ್ರಾಹಕರಿಗೆ ಜೆಸ್ಕಾಂ ಕಾರ್ಯ ಮತ್ತು ಪಾಲನೆಯ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande