ಮೀನುಗಾರಿಕೆ ಇಲಾಖೆ: ಕಿಸಾನ್ ಕ್ರೆಡಿಟ್ ಕಾರ್ಡ್ಗಳ ವಿತರಣೆ
ರಾಯಚೂರು, 03 ಜುಲೈ (ಹಿ.ಸ.) ಆ್ಯಂಕರ್: ಮೀನುಗಾರಿಕೆ ಇಲಾಖೆಯಿಂದ 2026-27ನೇ ಸಾಲಿಗೆ ರಾಯಚೂರು, ಮಾನ್ವಿ, ದೇವದುರ್ಗ, ಸಿರವಾರ ಮತ್ತು ಅರಕೇರಾ ತಾಲ್ಲೂಕುಗಳಿಗೆ ಸಂಬ0ಧಿಸಿದ0ತೆ ಮೀನುಗಾರರ ಸಹಕಾರ ಸಂಘಗಳ ಸದಸ್ಯರಿಂದ, ವೃತ್ತಿಪರ ಮೀನುಗಾರರಿಂದ ಹಾಗೂ ಆಸಕ್ತ ಮೀನು ಕೃಷಿಕರಿಂದ ಮೀನು ಕೃಷಿ ಚಟುವಟಿಕೆ
ಮೀನುಗಾರಿಕೆ ಇಲಾಖೆ: ಕಿಸಾನ್ ಕ್ರೆಡಿಟ್ ಕಾರ್ಡ್ಗಳ ವಿತರಣೆ


ರಾಯಚೂರು, 03 ಜುಲೈ (ಹಿ.ಸ.)

ಆ್ಯಂಕರ್: ಮೀನುಗಾರಿಕೆ ಇಲಾಖೆಯಿಂದ 2026-27ನೇ ಸಾಲಿಗೆ ರಾಯಚೂರು, ಮಾನ್ವಿ, ದೇವದುರ್ಗ, ಸಿರವಾರ ಮತ್ತು ಅರಕೇರಾ ತಾಲ್ಲೂಕುಗಳಿಗೆ ಸಂಬ0ಧಿಸಿದ0ತೆ ಮೀನುಗಾರರ ಸಹಕಾರ ಸಂಘಗಳ ಸದಸ್ಯರಿಂದ, ವೃತ್ತಿಪರ ಮೀನುಗಾರರಿಂದ ಹಾಗೂ ಆಸಕ್ತ ಮೀನು ಕೃಷಿಕರಿಂದ ಮೀನು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಬ್ಯಾಂಕುಗಳ ಮೂಲಕ ಸಾಲದ ಸೌಲಭ್ಯ ಒದಗಿಸಿ, ಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತ ಮೀನುಗಾರರು/ ಮೀನು ಕೃಷಿಕರು ಆಗಸ್ಟ್ 14ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ಮೀನುಗಾರಿಕೆಯ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande