
ಲಿಂಗಸುಗೂರು, 03 ಜುಲೈ (ಹಿ.ಸ.)
ಆ್ಯಂಕರ್: ಲಿಂಗಸುಗೂರು ಪಟ್ಟಣದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಾಯೋಜಿಕತ್ವದ ತಂತ್ರಜ್ಞಾನ ತರಬೇತಿ ಸಂಸ್ಥೆಗಳಿಗೆ ನೆರವು ವಿಶೇಷ ಘಟಕ ಗಿರಿಜನ ಉಪಯೋಜನೆ ಎಐಟಿಟಿ (ಎಸಿ&ಎಸ್.ಟಿ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಎಸ್.ಎಸ್.ಎಲ್.ಸಿ/ಐಟಿಐ/ಡಿಪ್ಲೊಮಾ/ಬಿಇ ಮುಗಿಸಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಟೂಲ್ ರೂಮ್ ಮೆಷಿನಿಸ್ಟ್ (ಟಿಆರ್ಎಮ್) 01 ವರ್ಷ ಮತ್ತು 4 ತಿಂಗಳ ಸಿಎನ್ಸಿ ಆಪರೇಟರ್, ಟರ್ನರ್, ಮಿಲ್ಲಿಂಗ್, ಗ್ರೆöÊಂಡಿAಗ್ ಕೋರ್ಸ್ಗಳ ತರಬೇತಿಗೆ ಆಸಕ್ತರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಐಟಿಟಿ (ಎಸಿ&ಎಸ್.ಟಿ) ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇರುತ್ತದೆ. ಮತ್ತು ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಇರುತ್ತದೆ. ಆಸಕ್ತ ಅಭ್ಯರ್ಥಿಗಳು 16 ರಿಂದ 45 ವರ್ಷದೊಳಗಿನ ಯುವಕ/ಯುವತಿಯರು ಭಾಗವಹಿಸಬಹುದು.
ತರಬೇತಿ ಅವಧಿಯಲ್ಲಿ (ಎಸಿ&ಎಸ್.ಟಿ) ಅಭ್ಯರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುವುದು. ಮತ್ತು ತರಬೇತಿ ಮುಗಿದ ನಂತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ನಂತರ ಕಂಪನಿಗಳಲ್ಲಿ ಉದ್ಯೋಗವಕಾಶವನ್ನು (ಪ್ಲೇಸ್ಮೆಂಟ್) ಕಲ್ಪಿಸಿ ಕೊಡಲಾಗುವುದು.ಆಸಕ್ತರು ಅರ್ಜಿಯನ್ನು ಜುಲೈ 03ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರ ಮೊಬೈಲ್ ಸಂಖ್ಯೆ: 8548038965, 8073830118, 8310600693ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಲಿಂಗಸುಗೂರು ಸರ್ಕಾರಿ ಜಿಟಿಟಿಸಿ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್