ಬಾಗಲಕೋಟೆಯಲ್ಲಿ ಒಂದೇ ಕಣ್ಣಿನ ಆಡು ಮರಿ ಜನನ : ಜನರಲ್ಲಿ ಅಚ್ಚರಿ
ಬಾಗಲಕೋಟೆ, 25 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತವಾಡಗಿ ಗ್ರಾಮದಲ್ಲಿ ಅಪರೂಪದ ದೈಹಿಕ ವೈಶಿಷ್ಟ್ಯ ಹೊಂದಿರುವ ಆಡು ಮರಿ ಜನಿಸಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಗ್ರಾಮದ ರೈತರೊಬ್ಬರ ಮನೆಯಲ್ಲಿ ಶುಕ್ರವಾರ ಆಡು ಗಂಡು ಮರಿಗೆ ಜನ್ಮ
ಕುರಿ


ಬಾಗಲಕೋಟೆ, 25 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತವಾಡಗಿ ಗ್ರಾಮದಲ್ಲಿ ಅಪರೂಪದ ದೈಹಿಕ ವೈಶಿಷ್ಟ್ಯ ಹೊಂದಿರುವ ಆಡು ಮರಿ ಜನಿಸಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಗ್ರಾಮದ ರೈತರೊಬ್ಬರ ಮನೆಯಲ್ಲಿ ಶುಕ್ರವಾರ ಆಡು ಗಂಡು ಮರಿಗೆ ಜನ್ಮ ನೀಡಿದೆ. ಆದರೆ ಗರ್ಭಾವಸ್ಥೆಯಲ್ಲಿನ ಬೆಳವಣಿಗೆ ಸಮರ್ಪಕವಾಗಿ ಆಗದ ಕಾರಣ, ಮರಿಯ ಹಣೆಯ ಮಧ್ಯಭಾಗದಲ್ಲಿ ಒಂದೇ ಕಣ್ಣು ರೂಪುಗೊಂಡಿದೆ. ಸಾಮಾನ್ಯವಾಗಿ ಇರಬೇಕಾದ ಮೂಗಿನ ಭಾಗವು ಬೆಳವಣಿಗೆಯಾಗದೆ ಇರುವುದರಿಂದ ಮರಿ ಬಾಯಿಯ ಮೂಲಕವೇ ಉಸಿರಾಟ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮರಿಯ ಅಪರೂಪದ ಜನ್ಮ ವೈಶಿಷ್ಟ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಬಂದು ಅದನ್ನು ವೀಕ್ಷಿಸುತ್ತಿದ್ದಾರೆ. ಹಲವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪಶುವೈದ್ಯರ ಪ್ರಕಾರ, ಇಂತಹ ಜನ್ಮ ವೈಪರೀತ್ಯಗಳು ಅತ್ಯಂತ ಅಪರೂಪವಾಗಿದ್ದು, ಗರ್ಭದಲ್ಲಿನ ಭ್ರೂಣದ ಬೆಳವಣಿಗೆಯಲ್ಲಿ ಉಂಟಾಗುವ ಅಸಹಜತೆಯಿಂದ ಇಂತಹ ಸ್ಥಿತಿ ಕಾಣಿಸಬಹುದು. ಮೂಗು ಇಲ್ಲದ ಕಾರಣ ಮರಿಯ ಉಸಿರಾಟ ಹಾಗೂ ಜೀವಿತಾವಧಿ ಬಗ್ಗೆ ಆತಂಕವಿದ್ದು, ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಈ ಅಪರೂಪದ ಘಟನೆ ಚಿತ್ತವಾಡಗಿ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸ್ಥಳೀಯರು ಆಶ್ಚರ್ಯದಿಂದ ಮರಿಯನ್ನು ವೀಕ್ಷಿಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande