
ಕೊಪ್ಪಳ, 25 ಜುಲೈ (ಹಿ.ಸ.)
ಆ್ಯಂಕರ್ : ಭಾಗ್ಯನಗರ ದಿಂದ ಸದ್ದು ಮಾಡುವ ಮೂಲಕ ದೇಶಾದ್ಯಂತ ಸಂಚರಿಸುವ ಚುಟುಕು ಸಾಹಿತ್ಯ ಪರಿಷತ್ ಕಾರ್ಯ ವೈಖರಿ ಯಶಸ್ಸು ದೊರೆಯಲಿ ಎಂದು ಉಪನ್ಯಾಸಕ ಡಾ. ರಾಜಕುಮಾರ್ ಹಾರೈಸಿದರು.
ಶನಿವಾರ ಸರಕಾರಿ ಪದವೀ ಪೂರ್ವ ಕಾಲೇಜು, ಸರಕಾರಿಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕಾಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಚುಟುಕು ಸಾಹಿತ್ಯ ಅಭಿಯಾನ, ಉಪನ್ಯಾಸ, ಕವಿಗೋಷ್ಠಿ, ಮತ್ತು ವಿದ್ಯಾರ್ಥಿಗಳಿಂದ ವಚನ ವಾಚನ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನಲ್ಲಿ ಚುಟುಕು ಸಾಹಿತ್ಯ ಪರಂಪರೆ ಅಗಾಧವಾಗಿ ಬೆಳೆದಿದೆ, ಚುಟುಕು ಸಾಹಿತ್ಯ ಕ್ಕೆ ಪರಿಸರ, ಸಾಮಾಜಿಕ ಹಾಗೂ ಅರಿವಿನ ಪ್ರಜ್ಞೆ ಇದೆ ಹೀಗಾಗಿ ಈ ಸಾಹಿತ್ಯಕ್ಕೆ ಭಾರೀ ಮೆಚ್ಚುಗೆ ಸಿಗುತ್ತಿದೆ. ಕಡಿಮೆ ಪದಗಳಲ್ಲಿ ಗಾಢ ಪ್ರಭಾವ ಹೊಂದಿದೆ ಬುದ್ಧ, ಕ್ರೈಸ್ತ ಅಂಬೇಡ್ಕರ್ ಅವರ ಕನಸನ್ನು ಕಾಣುತ್ತೆವೆ ಹಾಗೂ ಇತಿಹಾಸದ ಅನೇಕ ಕ್ಷೇತ್ರಗಳನ್ನು ಚುಟುಕು ಸಾಹಿತ್ಯ ಪ್ರತಿನಿಧಿಸುತ್ತದೆ, ನೆನೆಸುತ್ತದೆ ಎಂದು ರಾಜ್ ಕುಮಾರ್ ಬಣ್ಣಿಸಿದರು.
ವಿಶೇಷ ಉಪನ್ಯಾಸ ಮಾಡಿದ ಸಾಹಿತಿ, ಹಿರಿಯ ಪತ್ರಕರ್ತ ಜಿ. ಎಸ್. ಗೋನಾಳ ಅವರು ಮಕ್ಕಳಿಗೆ ಸದಭಿರುಚಿ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ, ಎಂ. ಜಿ. ಆರ್ ಅರಸು ನೇತೃತ್ವದ ಚುಟುಕು ಸಾಹಿತ್ಯ ಪರಿಷತ್ತುಕೊಪ್ಪಳ ಜಿಲ್ಲೆಯಲ್ಲಿ ಹಿರಿಯ ಸಾಹಿತಿ ಮಹಾಂತೇಶ್ ಮಲ್ಲನಗೌಡರ್ ಅಧ್ಯಕ್ಷತೆಯಲ್ಲಿ ಶುರುವಾದ ಪರಿಷತ್ ಇಂದು ರುದ್ರಪ್ಪ ಭಂಡಾರಿ ಅವರ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಚಟುವಟಿಕೆ ಮಾಡಿ ಜನರ ಗಮನ ಸೆಳೆದಿದೆ,ವಿದ್ಯಾರ್ಥಿಗಳು ಇಂಥ ಸಾಹಿತ್ಯದ ವೇದಿಕೆ ಬಳಸಿಕೊಂಡು ಸಾಹಿತ್ಯದ ಒಲವು ಮೂಲಕ ಉತ್ತಮ ಸಾಧನೆ ಮಾಡಬೇಕೆಂದರು.
ಕನ್ನಡ ಉಪನ್ಯಾಸಕರಾದ ಡಾ. ಮಹಾಂತೇಶ ನೆಲಾಗಣಿಯವರು ಕಾರ್ಯಕ್ರಮದಲ್ಲಿ, ಕೊಪ್ಪಳ ದ ಜಿಲ್ಲೆಯಾದ್ಯಂತ ಹಲವಾರು ಕವಿಗಳು, ಚುಟುಕುಗಳನ್ನು ಬರೆಯುತ್ತಿದ್ದಾರೆ, ಅವರೆಲ್ಲರ ಚುಟುಕುಗಳನ್ನು ವಿದ್ಯಾರ್ಥಿಗಳಾದ ನೀವೆಲ್ಲರೂ ಓದಿ, ನೀವೂ ಕೂಡಾ, ಕವಿಗಳಾಗಿ ಮುಂದೆ ಬರಬೇಕು, ಅದಕ್ಕೆ ಇಂತಹ ವೇದಿಕೆ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಸಾಹಿತಿ ಎ. ಪಿ. ಅಂಗಡಿ,ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ರುದ್ರಪ್ಪ ಭಂಡಾರಿ, ಸಾಹಿತಿ ಶಿವಪ್ರಸಾದ್ ಹಾದಿಮನಿ,ಪತ್ರಕರ್ತ ಕನಕರಾಯ್ ಬಿ, ಸಾಹಿತಿ ಶಿವಾನಂದ ಬಡಿಗೇರ್, ಶಿಕ್ಷಕರಾದ ಹನುಮಂತಪ್ಪ ಗಾಂಜಿ, ಮಾರುತಿ ಮೆಣೆದಾಳ ಸೇರಿದಂತೆ ಇತರರು ಇದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ ಕಿನ್ನಾಳ ವಹಿಸಿದ್ದರು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮೈಲಾರಪ್ಪ ಉಂಕಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ್ ಟಿ. ನಿರೂಪಿಸಿದರು.,ಶಿವಪ್ಪ ಕೋಗಳಿ, ವಂದಿಸಿದರು
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್