ಕೊಡಗಿನ ಜೀವನಾಡಿ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿ
ಕೊಡಗು, 25 ಜುಲೈ (ಹಿ.ಸ.): ಆ್ಯಂಕರ್ ಕೊಡಗಿನ ಜೀವನಾಡಿ ಹಾಗೂ ಪ್ರಮುಖ ಜಲಾಶಯವಾಗಿರುವ ಹಾರಂಗಿ ಜಲಾಶಯವು ಈ ಬಾರಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಸಂಪೂರ್ಣ ಭರ್ತಿಯಾಗಿದೆ. ಜಲಾಶಯವು ತನ್ನ ಗರಿಷ್ಠ ಮಟ್ಟವಾದ 2859 ಅಡಿಯನ್ನು ತಲುಪಿರುವ ಹಿನ್ನೆಲೆಯಲ್ಲಿ, ಜಲಾಶಯದಿಂದ ಅಧಿಕೃತವಾಗಿ ನದಿಗೆ ನೀರು ಬಿಡುಗಡೆ ಮ
HarangiDam KodaguNews


ಕೊಡಗು, 25 ಜುಲೈ (ಹಿ.ಸ.):

ಆ್ಯಂಕರ್

ಕೊಡಗಿನ ಜೀವನಾಡಿ ಹಾಗೂ ಪ್ರಮುಖ ಜಲಾಶಯವಾಗಿರುವ ಹಾರಂಗಿ ಜಲಾಶಯವು ಈ ಬಾರಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಸಂಪೂರ್ಣ ಭರ್ತಿಯಾಗಿದೆ. ಜಲಾಶಯವು ತನ್ನ ಗರಿಷ್ಠ ಮಟ್ಟವಾದ 2859 ಅಡಿಯನ್ನು ತಲುಪಿರುವ ಹಿನ್ನೆಲೆಯಲ್ಲಿ, ಜಲಾಶಯದಿಂದ ಅಧಿಕೃತವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.

ಜಲಾಶಯಕ್ಕೆ ಸದ್ಯ 4,500 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಕಾರಣ, ಸುರಕ್ಷತೆಯ ದೃಷ್ಟಿಯಿಂದ ಒಟ್ಟು 4 ಕ್ರೆಸ್ಟ್ ಗೇಟ್ಗಳನ್ನು ತೆರೆದು ಅಂದಾಜು 4,000 ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹೊರಬಿಡಲಾಗಿದೆ. ಜಲಾಶಯದಿಂದ ನದಿಗೆ ನೀರು ಹರಿಸುವ ಮುನ್ನ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಸ್ಥಳೀಯ ಗಣ್ಯರು ಜಲಾಶಯದ ಬಳಿ ವಿಶೇಷ ಪೂಜೆ ಸಲ್ಲಿಸಿ, ಕಾವೇರಿ ತಾಯಿಗೆ ನಮನ ಸಲ್ಲಿಸಿದರು. ನದಿಪಾತ್ರದ ಜನರಿಗೆಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಬಾರಿ ಸೈರನ್ ಮೊಳಗಿಸಿ ಎಚ್ಚರಿಕೆ ನೀಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande