ಬಾಗಲಕೋಟೆಯಲ್ಲಿ ರಾಷ್ಟ್ರೀಯ ಪಾಲಕ-ಪೋಷಕರ ದಿನಾಚರಣೆ
ಬಾಗಲಕೋಟೆ, 25 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರಾಷ್ಟ್ರೀಯ ಪಾಲಕ-ಪೋಷಕರ ದಿನಾಚರಣೆಯ ಅಂಗವಾಗಿ ಮಹಾಲಿಂಗಪುರದ ಡಾ. ಎಸ್. ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ಗ್ರೀನ್ ಬೇಸಿನ್ ವತಿಯಿಂದ ವಿಶೇಷ ಹಾಗೂ ಭಾವಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಹಶ


ಬಾಗಲಕೋಟೆ, 25 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರಾಷ್ಟ್ರೀಯ ಪಾಲಕ-ಪೋಷಕರ ದಿನಾಚರಣೆಯ ಅಂಗವಾಗಿ ಮಹಾಲಿಂಗಪುರದ ಡಾ. ಎಸ್. ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ಗ್ರೀನ್ ಬೇಸಿನ್ ವತಿಯಿಂದ ವಿಶೇಷ ಹಾಗೂ ಭಾವಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದಪೂಜೆ ಮಾಡುವ ಮೂಲಕ ಮಾತೃಭಕ್ತಿಯನ್ನು ವ್ಯಕ್ತಪಡಿಸಿ, ಪಾಲಕರ ತ್ಯಾಗ, ಪ್ರೀತಿ ಹಾಗೂ ಸೇವೆಯ ಮಹತ್ವವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತಾಯಂದಿರು ಶಾಲೆಗೆ ಆಗಮಿಸಿದ್ದರೆ, ಮಕ್ಕಳು ಸಂಪ್ರದಾಯಬದ್ಧವಾಗಿ ಅವರ ಪಾದಗಳನ್ನು ತೊಳೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಅಪರೂಪದ ದೃಶ್ಯ ನೆರೆದಿದ್ದ ಪೋಷಕರು, ಶಿಕ್ಷಕರು ಹಾಗೂ ಅತಿಥಿಗಳ ಮನಸಿಗೆ ಮುದ ನೀಡಿತು. ಹಲವಾರು ತಾಯಂದಿರು ಭಾವುಕರಾಗಿ ಕಣ್ಣೀರಿಟ್ಟರೆ, ಮಕ್ಕಳು ತಮ್ಮ ಜೀವನದಲ್ಲಿ ತಾಯಿ-ತಂದೆಯರ ಸ್ಥಾನ ಎಷ್ಟು ಅಮೂಲ್ಯ ಎಂಬುದನ್ನು ಅರಿತುಕೊಂಡರು.

ಲಯನ್ಸ್ ಕ್ಲಬ್ ಆಫ್ ಗ್ರೀನ್ ಬೇಸಿನ್ ಪದಾಧಿಕಾರಿಗಳು ಮಾತನಾಡಿ, ಆಧುನಿಕ ಜೀವನಶೈಲಿಯಲ್ಲಿ ಕುಟುಂಬ ಮೌಲ್ಯಗಳು ಹಾಗೂ ಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ರಾಷ್ಟ್ರೀಯ ಪಾಲಕ-ಪೋಷಕರ ದಿನಾಚರಣೆಯ ಉದ್ದೇಶವೂ ಇದೇ ಆಗಿದ್ದು, ಇಂತಹ ಕಾರ್ಯಕ್ರಮಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ, ಶಿಕ್ಷಣದ ಜೊತೆಗೆ ಸಂಸ್ಕಾರವೂ ಮಕ್ಕಳ ಜೀವನದಲ್ಲಿ ಅತ್ಯಂತ ಮುಖ್ಯವಾಗಿದೆ. ತಾಯಿ-ತಂದೆಯರ ಆಶೀರ್ವಾದವೇ ಮಕ್ಕಳ ಯಶಸ್ಸಿನ ಮೊದಲ ಮೆಟ್ಟಿಲಾಗಿದ್ದು, ಪೋಷಕರಿಗೆ ಗೌರವ ಸಲ್ಲಿಸುವ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರು, ಶಾಲೆಯ ಶಿಕ್ಷಕ-ಶಿಕ್ಷಕಿಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವು ಕುಟುಂಬ ಮೌಲ್ಯಗಳು, ಹಿರಿಯರ ಗೌರವ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಸಾರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande