ಆಗಸ್ಟ್ 3ರಂದು ಬೆಂಗಳೂರು ಇಂಡಿಯಾ ನ್ಯಾನೋ 14ನೇ ಆವೃತ್ತಿಗೆ ಚಾಲನೆ
ಬೆಂಗಳೂರು, 25 ಜುಲೈ (ಹಿ.ಸ.): ಆ್ಯಂಕರ್: ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದ ದೇಶದ ಅತಿದೊಡ್ಡ ಹಾಗೂ ಸಮಗ್ರ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವಾಗಿರುವ ''ಬೆಂಗಳೂರು ಇಂಡಿಯಾ ನ್ಯಾನೋ'' ಸಮಾವೇಶದ 14ನೇ ಆವೃತ್ತಿಯು ಇದೇ ಆಗಸ್ಟ್ 3ರಿಂದ 5ರವರೆಗೆ ನಗರದ ದಿ ಲಲಿತ್ ಹೋಟೆಲ್ನಲ್ಲಿ ಅದ್ಧೂರ
BengaluruIndiaNano #NanoTechnology


ಬೆಂಗಳೂರು, 25 ಜುಲೈ (ಹಿ.ಸ.):

ಆ್ಯಂಕರ್:

ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದ ದೇಶದ ಅತಿದೊಡ್ಡ ಹಾಗೂ ಸಮಗ್ರ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವಾಗಿರುವ 'ಬೆಂಗಳೂರು ಇಂಡಿಯಾ ನ್ಯಾನೋ' ಸಮಾವೇಶದ 14ನೇ ಆವೃತ್ತಿಯು ಇದೇ ಆಗಸ್ಟ್ 3ರಿಂದ 5ರವರೆಗೆ ನಗರದ ದಿ ಲಲಿತ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಸಮಾವೇಶದ ಪೂರ್ವಭಾವಿ ಕಾರ್ಯಕ್ರಮವು ಇಂದು ವಿಧಾನಸೌಧದಲ್ಲಿ ನೆರವೇರಿತು. ಸಭೆಯಲ್ಲಿ ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಪ್ರೊ. ನವಕಾಂತ ಭಟ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅತ್ಯಾಧುನಿಕ ಸಂಶೋಧನೆಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಉತ್ಪನ್ನಗಳು, ಸುಸ್ಥಿರ ಕೈಗಾರಿಕೆಗಳು ಮತ್ತು ಜನರ ಜೀವನಮಟ್ಟ ಸುಧಾರಿಸುವ ಪರಿಹಾರಗಳಾಗಿ ರೂಪಿಸುವ ಪರಿಸರ ವ್ಯವಸ್ಥೆ ನಿರ್ಮಿಸಲು ಕರ್ನಾಟಕ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ತಿಳಿಸಿದರು.

ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ – ಪರಿಕಲ್ಪನೆ, ಸಮನ್ವಯ, ವಾಣಿಜ್ಯೀಕರಣ' ಎಂಬುದು ಈ ಬಾರಿಯ ಸಮಾವೇಶದ ಮುಖ್ಯ ಧ್ಯೇಯವಾಗಿದೆ.

ಕೃತಕ ಬುದ್ಧಿಮತ್ತೆ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನ್ಯಾನೋ ತಂತ್ರಜ್ಞಾನವು ಬೆರೆಯುತ್ತಿರುವ ಹೊಸ ಹೆಜ್ಜೆಯನ್ನು ಈ ಸಮಾವೇಶ ಬಿಂಬಿಸಲಿದೆ ಎಂದು ತಿಳಿಸಿದ್ದಾರೆ.

ಸಮಾವೇಶದ ಪ್ರಮುಖ ಮುಖ್ಯಾಂಶಗಳು ಹೀಗಿದ್ದು ನ್ಯಾನೋ ತಯಾರಿಕೆ, ವಿಶ್ಲೇಷಣೆ ಮತ್ತು ಜೈವಿಕ ವಿಜ್ಞಾನದಲ್ಲಿ ಇದರ ಬಳಕೆ ಕುರಿತು ತಜ್ಞರಿಂದ ಪ್ರಾಯೋಗಿಕ ತರಬೇತಿ. ಮುಖ್ಯ ಸಮ್ಮೇಳನ (ಆಗಸ್ಟ್ 4-5): ಸೆಮಿಕಂಡಕ್ಟರ್, ಕೃಷಿ-ಆರೋಗ್ಯ, ಹಾಗೂ ಇಂಧನ-ಪರಿಸರ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆಯ ಕುರಿತು ವಿಶೇಷ ಗೋಷ್ಠಿಗಳು. ನ್ಯಾನೋಸ್ಪಾರ್ಕ್ಸ್ ಸ್ಟಾರ್ಟ್ಅಪ್ ಪಿಚಿಂಗ್: ನವೋದ್ಯಮಿಗಳು ಮತ್ತು ತಂತ್ರಜ್ಞಾನ ಉದ್ಯಮಿಗಳಿಗೆ ಹೂಡಿಕೆದಾರರನ್ನು ಭೇಟಿಯಾಗಲು ಹಾಗೂ ವಾಣಿಜ್ಯೀಕರಣಕ್ಕೆ ನೆರವಾಗುವ ವಿಶೇಷ ವೇದಿಕೆ ಇದಾಗಲಿದೆ.

ಈ ಬಾರಿಯ ಸಮಾವೇಶದಲ್ಲಿ 10ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, 26ಕ್ಕೂ ಹೆಚ್ಚು ಸಭೆಗಳು, 80ಕ್ಕೂ ಹೆಚ್ಚು ತಜ್ಞರಿಂದ ಉಪನ್ಯಾಸಗಳು, 200ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳ ಪ್ರದರ್ಶನ ಹಾಗೂ 50ಕ್ಕೂ ಅಧಿಕ ಪ್ರದರ್ಶನ ಮಳಿಗೆಗಳು ಏರ್ಪಡುವ ನಿರೀಕ್ಷೆಯಿದೆ. 1,000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande