
ಸಂಡೂರು, 24 ಜುಲೈ (ಹಿ.ಸ.)
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಡೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ 2007-08ನೇ ಸಾಲಿನಿಂದ ದಿನಾಂಕ 31-07-2008 ರವರೆಗೆ ಜನಿಸಿ, ಭಾಗ್ಯಲಕ್ಷ್ಮಿ ಯೋಜನೆಯಡಿ ಬಾಂಡ್ ಪಡೆದು 18 ವರ್ಷ ಪೂರ್ಣಗೊಂಡಿರುವ ಫಲಾನುಭವಿಗಳಿಗೆ ಪರಿಪಕ್ವ (ಮೆಚ್ಯುರಿಟಿ) ಮೊತ್ತ ಪಾವತಿಸಲು ಪ್ರಸ್ತಾಪನೆಗಳನ್ನು ಸ್ವೀಕರಿಸಲಾಗುತ್ತಿದೆ.
ಅರ್ಹ ಫಲಾನುಭವಿಗಳು ತಕ್ಷಣವೇ ತಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಸಂಡೂರಿನ ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ಸ್ತ್ರೀ ಶಕ್ತಿ ಭವನದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:
ಭಾಗ್ಯಲಕ್ಷ್ಮಿ ಮೂಲ ಬಾಂಡ್ ಮತ್ತು ಮಾರ್ಗ ಬಾಂಡ್ ಜಿರಾಕ್ಸ್ ಪ್ರತಿ (ಮೂಲ ಬಾಂಡ್ ಕಳೆದುಹೋಗಿದ್ದಲ್ಲಿ ಎಫ್.ಐ.ಆರ್. ಪ್ರತಿ ಅಗತ್ಯ). ದಿನಾಂಕ/ಹೆಸರು ವ್ಯತ್ಯಾಸವಿದ್ದಲ್ಲಿ ಕೋರ್ಟ್ ಅಫಿಡವಿಟ್. ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ / ಅಂಕಪಟ್ಟಿ ಹಾಗೂ ಎಸ್.ಎಸ್.ಎಲ್.ಸಿ ಅಂಕಪಟ್ಟಿ. ಜನನ ಪ್ರಮಾಣ ಪತ್ರ. ಬಿ.ಪಿ.ಎಲ್. ಕಾರ್ಡ್ (ಕಡ್ಡಾಯ). ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಪುಸ್ತಕ ಮತ್ತು ಇತ್ತೀಚಿನ ಬ್ಯಾಂಕ್ ಸ್ಟೇಟ್ಮೆಂಟ್ ಜಿರಾಕ್ಸ್ ಪ್ರತಿ.
ಮಗು, ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ಗಳು. ಸಂತಾನ ಹರಣ ಪ್ರಮಾಣ ಪತ್ರ (ಇಲ್ಲದಿದ್ದಲ್ಲಿ ವಂಶವೃಕ್ಷ). ತಂದೆ/ತಾಯಿ ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ. ಫಲಾನುಭವಿಯ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಕಚೇರಿಗೆ ಖುದ್ದಾಗಿ ಹಾಜರಾಗಿ, ಒಟಿಪಿ ಯನ್ನು ಒದಗಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.08395-261156 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್