
ಕೋಲಾರ, ೨೪ ಜುಲೈ (ಹಿ.ಸ):
ಆ್ಯಂಕರ್ : ಕೋಲಾರದ ಕುರುಬರಪೇಟೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೮೦ನೇ ರಾಷ್ಟ್ರ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.
ಗೌರಿಪೇಟೆಯ ಕೆ.ಎನ್.ರವೀಂದ್ರನಾಥ್ ಮಾತನಾಡಿ ಭಾರತಕ್ಕೆ ಸ್ವಾತಂತ್ರ್ಯಬರುವುದಕ್ಕಿ0ತ ಮುಂಚಿತವಾಗಿಯೇ ೨೨ ಜುಲೈ ೧೯೪೭ ರಲ್ಲಿ ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಿದ ದಿನವಾಗಿದೆ. ಈ ಧ್ವಜವನ್ನು ಆಂಧ್ರಪ್ರದೇಶದ ಮಚಲಿ ಪಟ್ಟಣಂ ಬಳಿಯ ಭಟ್ಲ ಪೆನ್ನು ಮಾರ್ರು ಗ್ರಾಮದಲ್ಲಿ ಮೂರನೇ ಆಗಸ್ಟ್ ೧೮೭೬ ರಲ್ಲಿ ಜನಿಸಿದ ಪಿಂಗಾಳಿ ವೆಂಕಯ್ಯನವರು ವಿನ್ಯಾಸಗೊಳಿಸಿದ್ದಾರೆ ಎಂದು ತಿಳಿಸಿದರು.
ಕಳೆದ ೧೯೨೧ ರಲ್ಲಿ ಬೆಜವಾಡ ಈಗಿನ ವಿಜಯವಾಡದಲ್ಲಿ ನಡೆದ ಎಐಸಿಸಿ ಅಧಿವೇಶನದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಪಿಂಗಾಳಿ ವೆಂಕಯ್ಯನವರಿಗೆ ಧ್ವಜದ ವಿನ್ಯಾಸವನ್ನು ಸಲ್ಲಿಸಲು ಕೇಳುತ್ತಾರೆ. ಆಗ ವೆಂಕಯ್ಯನವರು ಕೆಂಪು ಮತ್ತು ಹಸಿರು ಬಣ್ಣದ ಧ್ವಜವನ್ನು ತೋರಿಸಿ ಕೆಂಪು ಬಣ್ಣವು ಹಿಂದುಗಳನ್ನು ಮತ್ತು ಹಸಿರು ಬಣ್ಣವು ಮುಸ್ಲಿಮರನ್ನು ಪ್ರತಿನಿಧಿಸುವುದಾಗಿ ತಿಳಿಸುತ್ತಾರೆ. ಆಗ ಗಾಂಧೀಜಿಯವರ ಸಲಹೆಯಂತೆ ಇದಕ್ಕೆ ದೇಶದ ಎಲ್ಲಾ ಇತರ ಪಂಗಡಗಳು ಮತ್ತು ಧರ್ಮಗಳನ್ನು ಪ್ರತಿನಿಧಿಸುವ ಬಿಳಿ ಪಟ್ಟಿಯನ್ನು ಸೇರಿಸಲಾಯಿತು. ನಂತರ ಕೆಂಪು ಬಣ್ಣವನ್ನು ಕಿತ್ತಲೆ ಬಣ್ಣಕ್ಕೆ ಬದಲಾಯಿಸಲಾಯಿತು ಮತ್ತು ಮಧ್ಯದಲ್ಲಿ ಅಶೋಕ ಚಕ್ರವನ್ನು ಸೇರಿಸಲಾಯಿತು. ಅಂದಿನಿ0ದ ಇಂದಿನವರೆಗೆ ಪ್ರತಿ ವರ್ಷ ಜುಲೈ ತಿಂಗಳು ೨೨ನೇ ತಾರೀಕಿನಂದು ರಾಷ್ಟ್ರಧ್ವಜದ ದಿನಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಮುಖ್ಯೋಪಾಧ್ಯಾಯಿನಿ ಸುಜಾತ ಮಾತನಾಡಿ ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಲ್ಲಿ ತಯಾರು ಮಾಡಬೇಕು. ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ಮಹಾತ್ಮ ಹಂಸರಾಜ್ ರವರ ಸಲಹೆಯಂತೆ ಸೇರಿಸಲಾಯಿತು. ಇಡೀ ಭಾರತ ದೇಶಕ್ಕೆ ಹೆಚ್ಚು ಖಾದಿ ರಾಷ್ಟ್ರಧ್ವಜಗಳನ್ನು ಪೂರೈಸಿರುವ ರಾಜ್ಯ ಕರ್ನಾಟಕ ರಾಜ್ಯ ವಾಗಿರುತ್ತದೆ ಎಂದರು.
ಶಿಕ್ಷಕಿ ಕೆ.ಎಸ್.ಪದ್ಮಾವತಮ್ಮ ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ಭಾರತೀಯರು ಬ್ರಿಟನ್ ರಾಷ್ಟ್ರ ಧ್ವಜವಾದ ಜ್ಯಾಕ್ ಗೆ ನಮಸ್ಕರಿಸಬೇಕಾಗಿತ್ತು. ಆಗ ಇದರಿಂದ ಕಸಿವಿಸಿಕೊಂಡಿರುತರೆ ಪಿಂಗಾಳಿ ವೆಂಕಯ್ಯನವರು ಭಾರತೀಯರಿಗಾಗಿ ಪ್ರತ್ಯೇಕ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸುವ ಅಗತ್ಯವನ್ನು ಅರಿತುಕೊಂಡು,ಪ್ರೇರಿತವಾಗಿ ಇಂದಿನ ತ್ರಿವರ್ಣ ಧ್ವಜದ ನಿರ್ಮಾಣವನ್ನು ಮಾಡಿದರು ಎಂದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ ದೇಶಪ್ರೇಮ, ದೇಶಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಯ, ಶಿಸ್ತು, ಕರ್ತವ್ಯವನ್ನು ಪಾಲನೆ ಮಾಡುವ ಮೂಲಕ ಈ ದೇಶದ ಕಿತ್ತೂರು ರಾಣಿ ಚನ್ನಮ್ಮ, ಜಾನ್ಸಿ ರಾಣಿ ಲಕ್ಷಿö್ಮಬಾಯಿ, ಸಂಗೊಳ್ಳಿರಾಯಣ್ಣ, ಗಾಂದಿಜೀ, ಅಂಬೇಡ್ಕರ್, ಸುಭಾಷ್ಚಂದ್ರ ಬೋಸ್, ಪಿಂಗಳಿ ವೆಂಕಯ್ಯ, ಮಹತ್ಮ ಹಂಸರಾಜ್ ರಂತಹ ಜೀವನದ ಚರಿತ್ರೆಯನ್ನು ಓದಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಲು ತಿಳಿಸಿದರು.
ಕುರುಬರಪೇಟೆಯ ಕೆ.ವಿ.ಶ್ರೀರಾಮ್ ಮಾತನಾಡಿ ಶಾಲೆಯ ಅಭಿವೃದ್ಧಿಗೆ ನಾನು ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ. ಅದೇ ರೀತಿ ಇತರರು ಶಾಲೆಗೆ ತಮ್ಮ ಕೈಲಾದ ಸಹಾಯವನ್ನು ಮಾಡಿ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಸಹಕರಿಸಬೇಕೆಂದು ಕೋರಿದರು. ರೋಟರಿ ಸೆಂಟ್ರಲ್ ಅಧ್ಯಕ್ಷರಾದ ಶ್ರೀನಾಥ್ ವೆಂಕಟಾದ್ರಿ ರವರು ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಪೆನ್ನುಗಳನ್ನು ನೀಡಿದರು.
ನಿವೃತ ಎ.ಎಸ್.ಐ. ಮುನಿಕೃಷ್ಣಯ್ಯ, ಎಂ.ನಾರಾಯಣ್, ಸಾಹಿತಿ ಡಾ.ಶರಣಪ್ಪ ಗಬ್ಬೂರ್, ಕೋಲಾರ ಸೆಂಟ್ರಲ್ ಸಂಸ್ಥೆಯ ನಿಕಟಪೂರ್ವ ಉಪಾಧ್ಯಕ್ಷ ಕೆ.ಹೆಚ್.ನಾಗರಾಜ್, ಕೆ.ಎನ್.ಎನ್. ಪ್ರಕಾಶ್, ಅಸಿಸ್ಟೆಂಟ್ ಗೌರರ್ನರ್ ಕೆ.ಎಸ್.ಸುಧಾಕರ್, ಪದಾಧಿಕಾರಿಗಳಾದ ಆರ್.ಕೆ.ಸುಂದರ್ ಪ್ರಕಾಶ್, ಹೆಚ್. ರಾಜಕುಮಾರ್, ಹೆಚ್.ಎಂ.ಮಂಜುನಾಥ್, ರೆಮೇಶ್, ಮುನಿಕೃಷ್ಣ, ಶಿಕ್ಷಕಿ ಶೋಭಾವತಿ, ಪದ್ಮವತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್