ಅರಾಭಿಕೊತ್ತನೂರು ಪ್ರೌಢ ಶಾಲೆಯಲ್ಲಿ ಅಣಕು ಸಂಸತ್ ಚುನಾವಣೆ
ಅರಾಭಿಕೊತ್ತನೂರು ಪ್ರೌಢ ಶಾಲೆಯಲ್ಲಿ ಅಣಕು ಸಂಸತ್ ಚುನಾವಣೆ
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಯುವ ಸಂಸತ್ ಅಣಕು ಮತದಾನ ನಡೆಯಿತು.


ಕೋಲಾರ, ೨೪ ಜುಲೈ (ಹಿ.ಸ):

ಆ್ಯಂಕರ್ : ಪವಿತ್ರವಾದ ಮತದಾನದ ಹಕ್ಕು ಚಲಾವಣೆ ಹಾಗೂ ಪ್ರಜಾಪ್ರಭುತ್ವ ಸರ್ಕಾರ ಮಹತ್ವದ ಕುರಿತು ಅರಿವು ಮೂಡಿಸಲು ವಿದ್ಯಾರ್ಥಿಗಳಿಂದಲೇ ಶಾಲಾ ಸಂಸತ್ ರಚನೆಗಾಗಿ ಚುನಾವಣೆಯನ್ನು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಸಲಾಯಿತು. ಚುನಾವಣೆ ಅಧಿಕೃತ ಘೋಷಣೆ, ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ, ನಾಮಪತ್ರ ವಾಪಸ್ಸಾತಿಗೆ ಅವಕಾಶ, ಅಂತಿಮ ಕಣದಲ್ಲಿ ಉಳಿದವರಿಗೆ ಪ್ರಚಾರಕ್ಕಾಗಿ ಒಂದು ವಾರ ಕಾಲ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ ವಿಧಾನದ ಅರಿವು ಮೂಡಿಸಲಾಯಿತು.

ಚುನಾವಣೆಗಾಗಿ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ವಿದ್ಯಾರ್ಥಿಗಳೇ ಮತಗಟ್ಟೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದರು. ಮುಖ್ಯಶಿಕ್ಷ ತಾಹೇರಾನುಸ್ರತ್, ಸಮಾಜವಿಜ್ಞಾನ ಶಿಕ್ಷಕಿಯರಾದ ರಮಾದೇವಿ, ಚೈತ್ರಾ ಮಾರ್ಗದರ್ಶನದಲ್ಲಿ ನಡೆದ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಯಾಗಿ ಮಧುಶ್ರೀ, ಒಂದನೇ ಪೋಲಿಂಗ್ ಅಧಿಕಾರಿಯಾಗಿ ಸ್ಪಂದನ, ೨ನೇ ಪೋಲಿಂಗ್ ಅಧಿಕಾರಿ ಹರ್ಷಿತಾ, ೩ನೇ ಪೋಲಿಂಗ್ ಅಧಿಕಾರಿಯಾಗಿ ನಂದಿನಿ,ಗುರುತು ಹಾಕುವ ಸಿಬ್ಬಂದಿಯಾಗಿ ಶೋಭಶ್ರೀ, ಪೊಲಿಸ್ ಪೇದೆಯಾಗಿ ಮತಗಟ್ಟೆ ರಕ್ಷಣೆಗೆ ಸಮವಸ್ತç ಧರಿಸಿ ಶರಣ್ ಕಾರ್ಯನಿರ್ವಹಿಸಿದರು.

ಸೂಕ್ಷö್ಮ ವೀಕ್ಷಕರಾಗಿ ಶಿಕ್ಷಕರಾದ ಆರ್.ವೆಂಕಟರೆಡ್ಡಿ, ಶ್ವೇತಾ ಕೆಲಸ ಮಾಡಿದರು. ಮತದಾನದಲ್ಲಿ ಪಾಲ್ಗೊಳ್ಳಲು ಗುರುತಿನ ಚೀಟಿ ಕಡ್ಡಾಯ ಎಂಬ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಲು ಸೂಚಿಸಲಾಗಿತ್ತು. ಚುನಾವಣೆಗೆ ೧೦ ಸ್ಥಾನಗಳಿಗೆ ೨೦ ಮಂದಿ ಸ್ವರ್ಧಿಸಿದ್ದು, ಸ್ವರ್ಧಾಗಳುಗಳಿಗಾಗಿ ವಿವಿಧ ಚಿತ್ರಗಳುಳ್ಳ ವರ್ಣರಂಜಿತ ಮತಪತ್ರಗಳನ್ನು ಮುದ್ರಿಸಿ ಕೊಡಲಾಗಿತ್ತು. ಆಧಾರ್ಕಾಡ್, ಗುರುತಿನ ಚೀಟಿ ಹಿಡಿದು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಖುಷಿ ಕಂಡು ಬಂತು.

ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳು ಸಾರ್ವತ್ರಿಕ ಚುನಾವಣೆ ಮತಗಟ್ಟೆಯಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುವ ರೀತಿಯಲ್ಲೇ ಗುರುತಿನ ಚೀಟಿ ಇಲ್ಲದವರಿಗೆ ಮತದಾನಕ್ಕೆ ಅವಕಾಶ ನೀಡದೇ ಹೊರ ಕಳುಹಿಸಿದರು. ವಿವಿಧ ಅಭ್ಯರ್ಥಿಗಳ ಏಜೆಂಟರನ್ನು ನೇಮಿಸಲಾಗಿದ್ದು, ಅವರು ಮತದಾನ ಪ್ರಕ್ರಿಯೆಗೆ ಸಾಕ್ಷಿಯಾದರು. ಮತ ಚಲಾಯಿಸಿದವರ ಕೈಗೆ ನೀಲಿ ಶಾಹಿ ಹಾಕುವ ಕಾರ್ಯವೂ ನಡೆಯಿತು. ಶೇ.೯೫ ರಷ್ಟು ಮತದಾನವಾಗಿದ್ದು, ಎಣಿಕೆ ಕಾರ್ಯವನ್ನು ಸೋಮವಾರ ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮತದಾನದ ಹಕ್ಕು ಚಲಾಯಿಸಲು ಅನೇಕ ಸುಶೀಕ್ಷಿತರೇ ಮತಗಟ್ಟೆಯತ್ತ ಸುಳಿಯುತ್ತಿಲ್ಲ ಇದರಿಂದಾಗಿ ಶೇಕಡಾವಾರು ಮತದಾನ ಕಡಿಮೆಯಾಗುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಹೆಚ್ಚಿಸಬೇಕಾಗಿದೆ . ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವವನ್ನು ತಿಳಿಸಿಕೊಡುವ ಕಡ್ಡಾಯ ಮತದಾನ ಮಾಡಲು ಅರಿವು ಮೂಡಿಸುವ ಈ ಯತ್ನ ನಡೆಸಲಾಗಿದೆ ಎಂದರು. ಇಡೀ ಚುನಾವಣೆಯ ನೇತೃತ್ವವನ್ನು ಶಿಕ್ಷಕರಾದ ರಮಾದೇವಿ,ಚೈತ್ರ ವಹಿಸಿದ್ದು, ಉಳಿದಂತೆ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ,ಭವಾನಿ,ವೆAಕಟರೆಡ್ಡಿ, ಸುಗುಣಾ,ಶ್ವೇತಾ,ಶ್ರೀನಿವಾಸಲು ಕಾರ್ಯನಿರ್ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande