ಬಳ್ಳಾರಿ : ಕಾನಿಪದ ಜಿಲ್ಲಾ ಘಟಕದಿಂದ ಜು. 26 ಕ್ಕೆ ಪತ್ರಿಕಾ ದಿನಾಚರಣೆ
ಬಳ್ಳಾರಿ, 24 ಜುಲೈ (ಹಿ.ಸ.) ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕವು ಜುಲೈ 26 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇರುವ ಗಾಂಧಿ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಂಡಿದೆ. `ಸಮಾಜಮುಖಿ'' ಮಾಸ ಪತ್ರಿಕೆಯ ಸಂಪಾದಕರ
ಬಳ್ಳಾರಿ : ಕಾನಿಪದ ಜಿಲ್ಲಾ ಘಟಕದಿಂದ ಜು. 26 ಕ್ಕೆ ಪತ್ರಿಕಾ ದಿನಾಚರಣೆ


ಬಳ್ಳಾರಿ : ಕಾನಿಪದ ಜಿಲ್ಲಾ ಘಟಕದಿಂದ ಜು. 26 ಕ್ಕೆ ಪತ್ರಿಕಾ ದಿನಾಚರಣೆ


ಬಳ್ಳಾರಿ : ಕಾನಿಪದ ಜಿಲ್ಲಾ ಘಟಕದಿಂದ ಜು. 26 ಕ್ಕೆ ಪತ್ರಿಕಾ ದಿನಾಚರಣೆ


ಬಳ್ಳಾರಿ : ಕಾನಿಪದ ಜಿಲ್ಲಾ ಘಟಕದಿಂದ ಜು. 26 ಕ್ಕೆ ಪತ್ರಿಕಾ ದಿನಾಚರಣೆ


ಬಳ್ಳಾರಿ, 24 ಜುಲೈ (ಹಿ.ಸ.)

ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕವು ಜುಲೈ 26 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇರುವ ಗಾಂಧಿ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಂಡಿದೆ.

`ಸಮಾಜಮುಖಿ' ಮಾಸ ಪತ್ರಿಕೆಯ ಸಂಪಾದಕರಾಗಿರುವ ಚಂದ್ರಕಾಂತ ವಡ್ಡು ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿರುವ ಕೆ. ನಿಂಗಜ್ಜ ಅವರು `ಮಾಧ್ಯಮ ಅಕಾಡೆಮಿ ಮತ್ತು ಪತ್ರಿಕೋದ್ಯಮ' ವಿಷಯದ ಕುರಿತು ಮಾತನಾಡಲಿದ್ದಾರೆ.

ಕಾನಿಪದ ಜಿಲ್ಲಾ ಅಧ್ಯಕ್ಷರಾಗಿರುವ ಎನ್. ವೀರಭದ್ರಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಬಳ್ಳಾರಿ ನಗರದಲ್ಲಿ ಹಲವು ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ಬಳ್ಳಾರಿಯ ಶಿವಾಜಿ ಮರಾಟಿ, ರಾಜಶೇಖರ, ಸಿರುಗುಪ್ಪದ ಪಿ. ಹುಸೇನಸಾಬ್ ಮತ್ತು ಕಂಪ್ಲಿಯ ವೈ.ಬಿ. ಆನಂದರಾವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ. ಲೋಕೇಶ್, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು ಅವರು

ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಆಗಿರುವ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಿದ್ದಾರೆ.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ. ತುಕರಾಂ ಅವರು ಉಪಸ್ಥಿತರಿರಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande