
ಬಳ್ಳಾರಿ, 24 ಜುಲೈ (ಹಿ.ಸ.)
ಆ್ಯಂಕರ್: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ ಹಾಗೂ ಬಳ್ಳಾರಿಯ ಸುಭದ್ರ ಹೆಲ್ತ್ ಕೇರ್ ಇವರ ಜಂಟಿ ಆಶ್ರಯದಲ್ಲಿ ಜುಲೈ 26ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಆಡಿಟೋರಿಯಂನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಮತ್ತು ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ಈ ಮಾಹಿತಿ ನೀಡಿದ್ದು, ಈ ಶಿಬಿರದಲ್ಲಿ ಜನರಲ್ ಹೆಲ್ತ್ ಚೆಕ್ಅಪ್, ಕಾರ್ಡಿಯಾಲಜಿ, ಆರ್ಥೋಪೆಡಿಕ್, ನ್ಯೂರಾಲಜಿ ವಿಭಾಗಗಳ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಅವಶ್ಯಕತೆ ಇರುವವರಿಗೆ ಉಚಿತವಾಗಿ ಇಸಿಜಿ, 2ಡಿ ಇಕೋ ಹಾಗೂ ಬೋನ್ ಮಿನರಲ್ ಡೆನ್ಸಿಟಿ (ಬಿಎಂಡಿ) ಪರೀಕ್ಷೆಗಳನ್ನು ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿದ ನಂತರ, ಯಾರಿಗಾದರೂ ಹೆಚ್ಚಿನ ಚಿಕಿತ್ಸೆ ಅಥವಾ ವಿಶೇಷ ವೈದ್ಯಕೀಯ ಸಲಹೆಯ ಅಗತ್ಯ ಕಂಡುಬಂದಲ್ಲಿ, ಅಂಥವರಿಗೆ ಸೂಕ್ತ ತಜ್ಞ ವೈದ್ಯರ ಬಳಿ ಚಿಕತ್ಸೆ
ಪಡೆಯಲು ಶಿಫಾರಸು ಮಾಡಲಿದ್ದಾರೆ. ಈ ಎಲ್ಲಾ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಆಸಕ್ತರು, ಈ ಶಿಬಿರದ ಸದುಪಯೋಗ ಮಾಡಿಕೊಂಡು ಆರೋಗ್ಯವಂತರಾಗಬೇಕು ಮತ್ತು ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿವರಗಳಿಗಾಗಿ : ಬಸವರಾಜ್ ಪಾಸೋಡಿ, ಮೊಬೈಲ್ ಸಂಖ್ಯೆ ; 99869 39441 ಮತ್ತು ವೆಂಕಟೇಶ್ ಕುಲಕರ್ಣಿ ಮೊಬೈಲ್ ಸಂಖ್ಯೆ : 9591921008 ಸಂಪರ್ಕಿಸಿರಿ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್