ಕರ್ತವ್ಯನಿಷ್ಠೆ ಮೆರೆದ ಅಧಿಕಾರಿಗಳಿಗೆ ಸನ್ಮಾನ: ಸಚಿವ ಕೃಷ್ಣ ಬೈರೇಗೌಡರಿಂದ ಪ್ರಶಂಸೆ
ಬೆಂಗಳೂರು, 24 ಜುಲೈ (ಹಿ.ಸ.): ಆ್ಯಂಕರ್:ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವ ವೇಳೆ ಕಿಡಿಗೇಡಿಗಳ ಹಲ್ಲೆಗೊಳಗಾದರೂ ಧೃತಿಗೆಡದೆ ತಮ್ಮ ಕರ್ತವ್ಯ ನಿರ್ವಹಿಸಿದ ಧೈರ್ಯಶಾಲಿ ಅಧಿಕಾರಿಗಳನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡರು ವಿಕಾಸಸೌಧದ ತಮ್ಮ ಕಚೇರಿಗೆ ಆಹ್ವಾನಿಸಿ
Felicitations for Brave BBMP Officers


ಬೆಂಗಳೂರು, 24 ಜುಲೈ (ಹಿ.ಸ.):

ಆ್ಯಂಕರ್:ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವ ವೇಳೆ ಕಿಡಿಗೇಡಿಗಳ ಹಲ್ಲೆಗೊಳಗಾದರೂ ಧೃತಿಗೆಡದೆ ತಮ್ಮ ಕರ್ತವ್ಯ ನಿರ್ವಹಿಸಿದ ಧೈರ್ಯಶಾಲಿ ಅಧಿಕಾರಿಗಳನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡರು ವಿಕಾಸಸೌಧದ ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿ, ಗೌರವಿಸಿದರು.

ಇತ್ತೀಚೆಗೆ ಶಿವಾಜಿನಗರದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೆಲ ಕಿಡಿಗೇಡಿಗಳು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದರು. ಈ ಎಲ್ಲ ಅಡೆತಡೆಗಳನ್ನು ಮೀರಿ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಮೆರೆದ ಅಧಿಕಾರಿಗಳ ಸಾಹಸವನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.

ಆತಿಫ್, ಕಾರ್ಯಾಪಲಕ ಅಭಿಯಂತರರು ಮಾಧವರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರರು. ಸಾವಿತ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು. ರುಚಿತಾ: ಸಹಾಯಕ ಅಭಿಯಂತರರು ಗೌತಮ್: ಇಂಜಿನಿಯರ್ ಜೆಸಿಬಿ ಮಾಲೀಕರು ಸೇರಿಂತೆ ಅನೇಕರನ್ನು ಸಚಿವರು ಸನ್ಮಾನ ಮಾಡಿದ್ದಾರೆ.

ಈ ಸನ್ಮಾನ ಸಮಾರಂಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ. ಅಮೃತ್ ರಾಜ್ ಉಪಸ್ಥಿತರಿದ್ದು, ಅಧಿಕಾರಿಗಳ ಸೇವಾ ಮನೋಭಾವವನ್ನು ಅಭಿನಂದಿಸಿದರು. ಯಾವುದೇ ಒತ್ತಡಗಳು ಹಾಗೂ ಅಡ್ಡಿಆತಂಕಗಳು ಎದುರಾದರೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ಅಧಿಕಾರಿಗಳು ಎದೆಗುಂದದೆ ಕಾರ್ಯನಿರ್ವಹಿಸಬೇಕು ಎಂದು ಈ ಸಂದರ್ಭದಲ್ಲಿ ಧೈರ್ಯ ತುಂಬಲಾಯಿತು.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande