ಕರ್ಕಶ ಶಬ್ದದ ದ್ವಿಚಕ್ರ ವಾಹನಗಳ ವಿರುದ್ಧ ಚಿಕ್ಕಬಳ್ಳಾಪುರ ಪೊಲೀಸರ ಕಠಿಣ ಕಾರ್ಯಾಚರಣೆ
ಚಿಕ್ಕಬಳ್ಳಾಪುರ, 24 ಜುಲೈ (ಹಿ.ಸ.): ಆ್ಯಂಕರ್: ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಅನಧಿಕೃತವಾಗಿ ಆಲ್ಟರ್ ಮಾಡಿಸಿ ಕರ್ಕಶ ಶಬ್ದದೊಂದಿಗೆ ನಗರದ ರಸ್ತೆಗಳಲ್ಲಿ ಪುಂಡಾಟ ಮೆರೆಯುತ್ತಿದ್ದ ಸವಾರರಿಗೆ ಚಿಕ್ಕಬಳ್ಳಾಪುರ ಟ್ರಾಫಿಕ್ ಪೊಲೀಸರು ದಿಢೀರ್ ಶಾಕ್ ನೀಡಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟ
Chikkaballapur Police


ಚಿಕ್ಕಬಳ್ಳಾಪುರ, 24 ಜುಲೈ (ಹಿ.ಸ.):

ಆ್ಯಂಕರ್:

ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಅನಧಿಕೃತವಾಗಿ ಆಲ್ಟರ್ ಮಾಡಿಸಿ ಕರ್ಕಶ ಶಬ್ದದೊಂದಿಗೆ ನಗರದ ರಸ್ತೆಗಳಲ್ಲಿ ಪುಂಡಾಟ ಮೆರೆಯುತ್ತಿದ್ದ ಸವಾರರಿಗೆ ಚಿಕ್ಕಬಳ್ಳಾಪುರ ಟ್ರಾಫಿಕ್ ಪೊಲೀಸರು ದಿಢೀರ್ ಶಾಕ್ ನೀಡಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೇ ಅವರ ನಿರ್ದೇಶನದಂತೆ ನಗರದ ಪ್ರಮುಖ ಶಿಡ್ಲಘಟ್ಟ ವೃತ್ತದಲ್ಲಿ ಟ್ರಾಫಿಕ್ ಪೊಲೀಸರು ವಿಶೇಷ ತಪಾಸಣೆ ನಡೆಸಿದರು. ಈ ವೇಳೆ ವಿವಿಧ ಬೈಕ್‌ಗಳಿಂದ ಜಪ್ತಿ ಮಾಡಿದ್ದ ನೂರಾರು ಆಲ್ಟರ್ ಮಾಡಿದ ಸೈಲೆನ್ಸರ್‌ಗಳನ್ನು ಸಾರ್ವಜನಿಕರ ಎದುರೇ ರಸ್ತೆಗಿಳಿಸಿ ಬುಲ್ಡೋಜರ್ ಮೂಲಕ ಪುಡಿಪುಡಿ ಮಾಡಿ ನಾಶಪಡಿಸಿದರು.

ಅನಧಿಕೃತವಾಗಿ ಬದಲಾಯಿಸಿದ ಸೈಲೆನ್ಸರ್‌ಗಳಿಂದ ಉಂಟಾಗುವ ಕರ್ಕಶ ಶಬ್ದವು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದರ ಜೊತೆಗೆ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಇಂತಹ ವಾಹನಗಳು ಸಂಚಾರ ನಿಯಮಗಳ ಉಲ್ಲಂಘನೆಯಾಗಿದ್ದು, ವಾಹನ ಚಾಲಕರು ತಮ್ಮ ಸುರಕ್ಷತೆಯ ಜೊತೆಗೆ ಸಾರ್ವಜನಿಕರ ನೆಮ್ಮದಿಯನ್ನೂ ಹಾಳು ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಬೈಕ್‌ನ ಸೈಲೆನ್ಸರ್ ಕೂಡ ಆಲ್ಟರ್ ಆಗಿದ್ದರೆ ಮುಂದಿನ ಸರದಿ ನಿಮ್ಮದೇ ಎಂದು ಎಚ್ಚರಿಕೆ ನೀಡಿರುವ ಸಂಚಾರಿ ಠಾಣೆ ಪೊಲೀಸರು, ಅತಿವೇಗ, ಕರ್ಕಶ ಶಬ್ದ ಹಾಗೂ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಮುಂದೆಯೂ ನಿರಂತರ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande