ಬಳ್ಳಾರಿ: ಪೀಪಲ್ ಟ್ರೀ ಪ್ರೌಢಶಾಲೆಯಲ್ಲಿ ಮಾನಸಿಕ ಆರೋಗ್ಯ ಜಾಗೃತಿ
ಬಳ್ಳಾರಿ, 24 ಜುಲೈ (ಹಿ.ಸ.) ಆ್ಯಂಕರ್ : ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಸರ್ಮಸ್ ವಲಿ ಅವರು ಹೇಳಿದ್ದಾರೆ. ನಗರದ ಪೀಪಲ್ ಟ್ರೀ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್
Bellary: Mental health awareness at People Tree High School


Bellary: Mental health awareness at People Tree High School


Bellary: Mental health awareness at People Tree High School


ಬಳ್ಳಾರಿ, 24 ಜುಲೈ (ಹಿ.ಸ.)

ಆ್ಯಂಕರ್ : ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಸರ್ಮಸ್ ವಲಿ ಅವರು ಹೇಳಿದ್ದಾರೆ.

ನಗರದ ಪೀಪಲ್ ಟ್ರೀ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರೌಢಶಾಲಾ ಹಂತವು ಹದಿಹರೆಯದ ವಯಸ್ಸಾಗಿದ್ದು, ಈ ಸಮಯದಲ್ಲಿ ಮಕ್ಕಳಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ವೇಗವಾಗಿ ನಡೆಯುತ್ತವೆ. ಪರೀಕ್ಷೆಯ ಭಯ, ಗೆಳೆಯರ ಒತ್ತಡ ಹಾಗೂ ಭವಿಷ್ಯದ ಆತಂಕದಿಂದ ಮಕ್ಕಳು ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.

ದೈಹಿಕವಾಗಿ ಆರೋಗ್ಯವಾಗಿರುವುದು ಎಷ್ಟು ಮುಖ್ಯವೋ, ಮಾನಸಿಕವಾಗಿ ಪ್ರಶಾಂತವಾಗಿ ಮತ್ತು ಸಕ್ರಿಯವಾಗಿರುವುದೂ ಅಷ್ಟೇ ಮುಖ್ಯ. ಕೋಪ, ದುಃಖ, ಭಯ, ಸಂತೋಷ ಇವೆಲ್ಲವೂ ಸಹಜ ಭಾವನೆಗಳು. ಈ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದೇ ಉತ್ತಮ ಮಾನಸಿಕ ಆರೋಗ್ಯ ಎಂದರು.

ವಿದ್ಯಾರ್ಥಿಗಳು ಎದುರಿಸುವ ಮುಖ್ಯ ಸವಾಲುಗಳು:

ಪರೀಕ್ಷೆ ಮತ್ತು ಅಭ್ಯಾಸದ ಒತ್ತಡ: ಅಂಕಗಳ ಚಿಂತೆ ಮತ್ತು ಪೋಷಕರು/ಶಿಕ್ಷಕರ ನಿರೀಕ್ಷೆಗಳು.

ಗೆಳೆಯರ ಒತ್ತಡ: ಇತರರಂತೆ ಕಾಣಿಸಿಕೊಳ್ಳಬೇಕು ಅಥವಾ ಅವರ ನಿಯಮಗಳಿಗೆ ಒಗ್ಗಿಕೊಳ್ಳಬೇಕು ಎಂಬ ಹಠ.

ಸಾಮಾಜಿಕ ಮಾಧ್ಯಮಗಳ ಪ್ರಭಾವ: ಇತರರ ಜೀವನವನ್ನು ನೋಡಿ ತಮ್ಮನ್ನು ತಾವು ಹೋಲಿಸಿಕೊಂಡು ಬೇಸರಪಡುವುದು.

ದೇಹದ ಬದಲಾವಣೆಗಳ ಆತಂಕ: ಹದಿಹರೆಯದಲ್ಲಿ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಕೀಳರಿಮೆ ಹೊಂದುವುದು.

ಮಾನಸಿಕವಾಗಿ ಗಟ್ಟಿಯಾಗಿರಲು ಸರಳ ಸೂತ್ರಗಳು:

ಭಾವನೆಗಳನ್ನು ಹಂಚಿಕೊಳ್ಳಿ: ಬೇಸರ ಅಥವಾ ಭಯವಾದಾಗ ಮನಸ್ಸಿನಲ್ಲೇ ಇಟ್ಟುಕೊಳ್ಳದೆ ಇಷ್ಟವಾದ ಸ್ನೇಹಿತರು, ಪೋಷಕರು ಅಥವಾ ಶಿಕ್ಷಕರ ಜೊತೆ ಮುಕ್ತವಾಗಿ ಮಾತನಾಡಿ.

ಸರಿಯಾದ ನಿದ್ರೆ ಮತ್ತು ಆಹಾರ: ದಿನಕ್ಕೆ 7-8 ಗಂಟೆಗಳ ನಿದ್ರೆ ಮತ್ತು ಪೌಷ್ಟಿಕ ಆಹಾರ ಮನಸ್ಸನ್ನು ಶಾಂತವಾಗಿಡುತ್ತದೆ.

ದೈಹಿಕ ಚಟುವಟಿಕೆ: ದಿನವೂ ಆಟವಾಡುವುದು, ಓಡುವುದು ಅಥವಾ ಯೋಗ ಮಾಡುವುದರಿಂದ ಮನಸ್ಸಿನಲ್ಲಿ ‘ಸಂತೋಷದ ಹಾರ್ಮೋನ್ ಗಳು’ ಉತ್ಪತ್ತಿಯಾಗುತ್ತವೆ.

ಹೋಲಿಕೆ ಬೇಡ: ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಯೂ ವಿಭಿನ್ನ. ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ.

ವಿರಾಮ ತೆಗೆದುಕೊಳ್ಳಿ: ನಿರಂತರವಾಗಿ ಓದುವ ಬದಲು ಮಧ್ಯೆ ಸಣ್ಣ ವಿರಾಮ ತೆಗೆದುಕೊಳ್ಳುವುದು ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.

ಉಚಿತ ‘ಟೆಲಿ-ಮಾನಸ್' ಸಹಾಯವಾಣಿ ಬಳಕೆಗೆ ಕರೆ:

ಕರ್ನಾಟಕ ರಾಜ್ಯ ಸರ್ಕಾರವು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ‘ಟೆಲಿ-ಮಾನಸ್' (14416) ಎಂಬ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಗೆ ಕರೆ ಮಾಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿ ಇಡಲಾಗುವುದು ಮತ್ತು ಧ್ವನಿಮುದ್ರಣ ಮಾಡುವುದಿಲ್ಲ.

ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆ, ಆತ್ಮಹತ್ಯೆ ಆಲೋಚನೆ, ಮಾದಕ ವ್ಯಸನ, ಸಂಬಂಧಗಳ ಸಮಸ್ಯೆ, ಜ್ಞಾಪಕ ಶಕ್ತಿ ತೊಂದರೆ ಅಥವಾ ಇತರ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಸೌಲಭ್ಯದ ಪ್ರಯೋಜನ ಪಡೆಯಬಹುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ವೈಷ್ಣವಿ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗನ್ನವರ, ಮಾನಸಿಕ ವಿಭಾಗದ ಸಮಾಜ ಕಾರ್ಯಕರ್ತ ಹೆಚ್. ಶಾಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಶಾಲಾ ಶಿಕ್ಷಕರಾದ ಗಂಗಣ್ಣ, ಸುರೇಖಾ, ಸಂಧ್ಯಾ, ರಿಜ್ವಾನ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande