ರೈಲ್ವೆ ಹಳಿ ದಾಟಲು ಬಂಗಾರಪೇಟೆ ಗಂಗಮ್ಮನಪಾಳ್ಯ ನಾಗರೀಕರ ಪರದಾಟ
ರೈಲ್ವೆ ಹಳಿ ದಾಟಲು ಬಂಗಾರಪೇಟೆ ಗಂಗಮ್ಮನಪಾಳ್ಯ ನಾಗರೀಕರ ಪರದಾಟ
ಬಂಗಾರಪೇಟೆ ನಗರದ ಗಂಗಮ್ಮಪಾಳ್ಯ ಬಳಿ ರೈಲ್ವೆ ಹಳಿ ದಾಟಲು ತೊಂದರೆಯಾಗುತ್ತಿದ್ದು, ಸಮಸ್ಯೆ ನಿವಾರಣೆಗೆ ಅಲ್ಲಿನ ನಾಗರೀಕರು ಬಂಗಾರಪೇಟೆ ರೈಲ್ವೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.


ಕೋಲಾರ, ೨೪ ಜುಲೈ (ಹಿ.ಸ):

ಆ್ಯಂಕರ್ : ಬಂಗಾರಪೇಟೆ ನಗರದ ಗಂಗಮ್ಮನಪಾಳ್ಯ ಹಾಗೂ ಖಾದರ್ ಲೇಔಟ್ ನಿವಾಸಿಗಳು ರೈಲ್ವೆ ಹಳಿ ದಾಟಲು ತೊಂದರೆಯಾಗಿದ್ದು, ಸ್ಥಳದಲ್ಲಿ ಮೇಲ್ಸೇತುವೆ ಅಥವಾ ರೈಲ್ವೆ ಗೇಟ್ನ್ನು ಅಳವಡಿಸಿ ನಾಗರೀಕರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಕರ್ನಾಟಕ ದಲಿತ ರೈತಸೇನೆಯಿಂದ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಕರ್ನಾಟಕ ದಲಿತ ರೈತಸೇನೆ ಅಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಮಾತನಾಡಿ, ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ, ನಗರಸಭೆ ವ್ಯಾಪ್ತಿಯ ಗಂಗಮ್ಮನಪಾಳ್ಯ ಹಾಗೂ ಖಾದರ್ ಲೇಔಟ್ ನಿವಾಸಿಗಳಿಗೆ ರೈಲ್ವೆ ಹಳಿ ದಾಟಲು ತೊಂದರೆಯಾಗಿದ್ದು, ಮೇಲ್ಸೇತುವೆ ನಿರ್ಮಾಣ ಮಾಡಲು ಅಥವಾ ಗೇಟ್ನ್ನು ಅಳವಡಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಭಾಗದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತ ಜನಾಂಗದವರು ಹೆಚ್ಚಾಗಿ ವಾಸಮಾಡುತ್ತಿದ್ದು, ಇಲ್ಲಿ ಕಡು ಬಡವರು, ದೀನ-ದಲಿತರು ಇದ್ದು, ಇಲ್ಲಿ ಬಂಗಾರಪೇಟೆ ಮತ್ತು ಕೋಲಾರ ಮಾರ್ಗದ ರೈಲ್ವೆ ಹಳಿ ಮದ್ಯದಲ್ಲಿದ್ದು, ಇಲ್ಲಿ ರೈಲ್ವೆ ಗೇಟ್ ಮೊದಲು ಇತ್ತು. ಆದರೆ ಇಲ್ಲಿ ಅಂಡರ್ಪಾಸ್ ನಿರ್ಮಾಣ ಮಾಡಿದ ನಂತರ ಗೇಟ್ನ್ನು ತೆಗೆಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಷ್ಟೆಅಲ್ಲದೆ ಅಂಡರ್ಪಾಸ್ನಲ್ಲಿ ಮಳೆಯಿಂದಾಗಿ ನೀರು ತುಂಬಿಕೊಳ್ಳುತ್ತಿದ್ದು, ಆಕಡೆಯಿಂದ ಈಕಡೆಗೆ ಓಡಾಡಲು ಹರಸಾಹಸ ಪಡುವಂತಹ ದುಸ್ಥಿತಿ ಉಂಟಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ರಾಜುಕೋಟಿ ಮಾತನಾಡಿ, ಅಂಡರ್ಪಾಸ್ ಬಳಿ ವಿದ್ಯುತ್ ದೀಪ ಇಲ್ಲದೆ ಕತ್ತಲು ತುಂಬಿರುತ್ತದೆ. ಹೆಣ್ಣು ಮಕ್ಕಳು, ಮಹಿಳೆಯರು ಓಡಾಡಲು ಹೆದರಿಕೆ ಉಂಟಾಗುತ್ತಿದೆ. ಹಾಗೂ ಮುಸ್ಲಿಂ ಬಾಂದವರ ಸ್ಮಶಾನಕ್ಕೂ ಸಹ ತೀವ್ರ ತೊಂದರೆಯಾಗುತ್ತಿದೆ. ವಯೋ ವೃದ್ದರು, ವಿದ್ಯಾರ್ಥಿಗಳು, ಹಾಗೂ ಶಾಲಾ ಬಸ್ಗಳು ಸಹ ಓಡಾಡಲು ಈ ಸ್ಥಳದಲ್ಲಿ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ತಾವಂದಿರು ರೈಲ್ವೆ ಅಂಡರ್ಪಾಸ್ ತಪ್ಪಿಸಿ, ಇಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿಕೊಡಬೇಕು ಇಲ್ಲವಾದರೆ ಗೇಟ್ ನಿರ್ಮಾಣ ಮಾಡಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಲಾಯಿತು ಎಂದರು.

ಈ ಸಂದರ್ಭದಲ್ಲಿ ಕಾರಿಮಾನಹಳ್ಳಿ ಅಶೋಕ್, ಕೊಂಡನಹಳ್ಳಿ ರವಿಕುಮಾರ್, ಯಳುವಳ್ಳಿ ತಿಮ್ಮರಾಜ್, ವಿನೋದ್ರಾಜ್, ರವಿಕುಮಾರ್, ಸುಭೀಕ್ಷನ್, ವಿಜಯ್ಕುಮಾರ್, ಪ್ರಧೀಪ್, ಅನಿತಾ, ಯಲ್ಲಮ್ಮ, ಅಶ್ವಿನಿ, ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande