
ಕೊಪ್ಪಳ, 24 ಜುಲೈ (ಹಿ.ಸ.)
ಆ್ಯಂಕರ್ : ಇಲ್ಲಿನ ಶಾರದಾ ಟಾಕೀಸ್ ಸಮೀಪದಲ್ಲಿರುವ ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಅಂಗವಾಗಿ ಭಾವಸಾರ ಕ್ಷತ್ರಿಯ ಸಮಾಜವು ಶನಿವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಬೆಳಿಗ್ಗೆ ನಾಲ್ಕು ಗಂಟೆಗೆ ಸುಪ್ರಭಾತ, 4.30ಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ದರ್ಶನ ಪ್ರಾರಂಭ, ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರ ತನಕ ವಿನಾಯಕ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ಶ್ರೀರಾಮ ಭಜನಾ ಮಂಡಳಿ ವತಿಯಿಂದ ಭಜನೆ, ಮಧ್ಯಾಹ್ನ 3.30ರಿಂದ ವಿಠ್ಠಲಕೃಷ್ಣ ಭಜನಾ ಮಂಡಳಿ ವತಿಯಿಂದ ಭಜನೆ, ಸಂಜೆ 4.30ರಿಂದ 5.30ರ ವರೆಗೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯಿಂದ ಭಜನೆ ಮತ್ತು ಪಾಂಡುರಂಗ ರುಕ್ಮಿಣಿ ದೇವರಿಗೆ ವಿಷ್ಣು ಸಹಸ್ರನಾಮ ಮತ್ತು ವಿಷ್ಣು ಸಹಸ್ರ ನಾಮಾವಳಿದೊಂದಿಗೆ ತುಳಸಿ ಮತ್ತು ಪುಷ್ಪಾರ್ಚನೆಮ ಸಂಜೆ 7 ಗಂಟೆಗೆ ವಾಸವಿ ದೇವಸ್ಥಾನದಿಂದ ಸಂಗೀತ ಹಾಗೂ ರಾತ್ರಿ 8.30ಕ್ಕೆ ಕೀರ್ತನೆ ಜರುಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್