
ಬೆಂಗಳೂರು, 24 ಜುಲೈ (ಹಿ.ಸ.):
ಆ್ಯಂಕರ್:
ನಂದನಾ ಕ್ಲಿನಿಕ್ ಹಾಗೂ ಪಿಸಿಎ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಜುಲೈ 25ರಂದು (ಶನಿವಾರ) ಹೆಬ್ಬಾಳದ ಕಾಫಿ ಬೋರ್ಡ್ ಲೇಔಟ್‌ನಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ (ಎಫ್‌ಬಿಎಸ್/ಆರ್‌ಬಿಎಸ್), ಹಿಮೋಗ್ಲೋಬಿನ್, ರಕ್ತದೊತ್ತಡ, ತೂಕ, ಎತ್ತರ, ಬಿಎಂಐ, ಎಸ್‌ಪಿಒ2, ನಾಡಿಮಿಡಿತ ಪರೀಕ್ಷೆ ಹಾಗೂ ವೈದ್ಯರ ಸಮಾಲೋಚನೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳು ಕೇವಲ ₹100 ಶುಲ್ಕದಲ್ಲಿ ಲಭ್ಯವಿರುತ್ತವೆ.
ಇದಲ್ಲದೆ, ಇಸಿಜಿ ಪರೀಕ್ಷೆಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದ್ದು, ಶೇಕಡಾ 50 ರಿಯಾಯಿತಿಯೊಂದಿಗೆ ₹200ಕ್ಕೆ (ಐಚ್ಛಿಕ) ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ.
ಶಿಬಿರದಲ್ಲಿ ಕುಟುಂಬ ವೈದ್ಯೆ ಡಾ. ಉಷಾ ಎಂ.ಕೆ. ಹಾಗೂ ಫಿಸಿಯೋಥೆರಪಿಸ್ಟ್ ಡಾ. ರಶ್ಮಿ ಶ್ರೀ ಎಸ್. ಅವರು ಸೇವೆ ನೀಡಲಿದ್ದಾರೆ.
ಈ ಶಿಬಿರವು ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.