
ಸಿರುಗುಪ್ಪ, 23 ಜುಲೈ (ಹಿ.ಸ.)
ಆ್ಯಂಕರ್ : ಸಿರುಗುಪ್ಪ ತಾಲ್ಲೂಕಿನ 30 ನೇ ವಾರ್ಡ್ನ ಎಸ್.ಡಬ್ಲೂ ಶಾಲೆ ಹತ್ತಿರ ನಿವಾಸಿಯಾದ ಎಂ.ಶೇಕಮ್ಮ ಎನ್ನುವ 25 ವರ್ಷದ ಮಹಿಳೆ ಮಾರ್ಚ್ 08 ರಂದು ಮನೆಯಿಂದ ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು: ಅಂದಾಜು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹರಿಶಿನ ಬಣ್ಣದ ಹೂ ಡಿಸೈನ್ವುಳ್ಳ ಚೂಡಿದಾರ ಟಾಪ್ ಹಾಗೂ ಬಿಳಿ ಬಣ್ಣದ ಲಗ್ಗಿನ್ಸ್ ಧರಿಸಿರುತ್ತಾಳೆ.
ಮಹಿಳೆ ಬಗ್ಗೆ ಸುಳಿವು ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ದೂ.08396-220333, ಸಿ.ಪಿ.ಐ ದೂ.08396-220003, ಡಿ.ಎಸ್.ಪಿ ದೂ.08396-276000 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್