
ಸಿರುಗುಪ್ಪ, 23 ಜುಲೈ (ಹಿ.ಸ.)
ಆ್ಯಂಕರ್ : ಸಿರುಗುಪ್ಪ ಪಟ್ಟಣದ 15 ನೇ ವಾರ್ಡ್ನ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಎದುರುಗಡೆ ಬಾಲಾಜೀ ಲೇ ಔಟ್ ನಿವಾಸಿಯಾದ ಅಂಬರೇಶ ಎಸ್. ಎನ್ನುವ 53 ವರ್ಷದ ವ್ಯಕ್ತಿಯು 2025 ರ ಆಗಸ್ಟ್ 01 ರಂದು ಕೆಲಸದ ನಿಮಿತ್ತ ಕುರುಗೋಡಿಗೆ ಹೋಗಿ ಬರುವುದಾಗಿ ತಿಳಿಸಿ ಪುನ: ಮನಗೆ ಬಾರದೇ ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು: ಅಂದಾಜು 5.10 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ಮುಖದ ಎಡಭಾಗದಲ್ಲಿ ಕಪ್ಪು ಮಚ್ಚೆ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಕ್ರೀಮ್ ಬಣ್ಣದ ತುಂಬು ತೋಳಿನ ಅಂಗಿ, ಅರ್ಧ ತೋಳಿನ ಬಿಳಿ ಬಣ್ಣದ ಬನಿಯನ್ ಹಾಗೂ ಲೈಟ್ ಬ್ರೌನ್ ಬಣ್ಣದ ಚಿಕ್ಕ ಲೈನ್ ಗಳಿರುವ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ.
ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ದೂ.08396-220333, ಸಿ.ಪಿ.ಐ ದೂ.08396-220003, ಡಿ.ಎಸ್.ಪಿ ದೂ.08396-276000 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್