ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ
ಬಳ್ಳಾರಿ, 23 ಜುಲೈ (ಹಿ.ಸ.) ಆ್ಯಂಕರ್ : ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಮತ್ತು ಛಲವಿದ್ದು ಸಾಧನೆಯತ್ತ ಗಮನ ನೀಡಿದಲ್ಲಿ ಸಾಧನೆ ಖಂಡಿತವಾಗಿಯೂ ಸಾಧ್ಯ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ ಅವರು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಬಿ.ಪಿ.ಎಸ್.ಸಿ. ಶಾ
ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಕಲೆ, ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ: ಸಾಧನೆ ಸಾಧ್ಯ – ಮೇಯರ್ ಪಿ.ಗಾದೆಪ್ಪ

ಬಳ್ಳಾರಿ, 23 ಜುಲೈ (ಹಿ.ಸ.)

ಆ್ಯಂಕರ್ : ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಮತ್ತು ಛಲವಿದ್ದು ಸಾಧನೆಯತ್ತ ಗಮನ ನೀಡಿದಲ್ಲಿ ಸಾಧನೆ ಖಂಡಿತವಾಗಿಯೂ ಸಾಧ್ಯ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ ಅವರು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಬಿ.ಪಿ.ಎಸ್.ಸಿ. ಶಾಲಾ ಹಾಗೂ ಕಾಲೇಜಿನ ಶರಣ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ `ಯುವ ಸೌರಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ-ತಾಯಿಗಳ ಕನಸುಗಳನ್ನು - ಆಸೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಸರ್ಕಾರ ಯುವಜನರಲ್ಲಿರುವ ಕಲಾ ಪ್ರತಿಭೆ ಮತ್ತು ಕ್ರೀಡಾ ಕೌಶಲ್ಯವನ್ನು ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಕಲಾಪ್ರೇಮಿಗಳು ಮತ್ತು ಕ್ರೀಡಾಪಟುಗಳು ಒಂದೆಡೆ ಸೇರಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸರ್ಕಾರ ವೇದಿಕೆ ಕಲ್ಪಿಸಿದ್ದು, ಇದನ್ನು ಪ್ರತಿಯೊಬ್ಬರೂ ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಪೀಳಿಗೆಯಲ್ಲಿ ನಾಡಿನ ಕಲೆ, ಸಂಸ್ಕøತಿ ಮತ್ತು ಜಾನಪದದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಯುವ ಸೌರಭ’ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಹೆಮ್ಮೆಯ ಕಲೆ ಮತ್ತು ಸಂಸ್ಕøತಿ, ಜಾನಪದ ಕಲೆ, ನಾಟಕ, ಸಂಗೀತ ಹಾಗೂ ನೃತ್ಯ ಮುಂತಾದ ಕಲಾ ಪ್ರಕಾರಗಳನ್ನು ಪರಿಚಯಿಸಿ, ಅವರಲ್ಲಿ ಕಲಾ ಆಸಕ್ತಿಯನ್ನು ಜಾಗೃತಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ನಾಡಿನ ವೈವಿಧ್ಯಮಯ ಕಲೆ ಮತ್ತು ಸಂಸ್ಕøತಿಯನ್ನು ಬಿಂಬಿಸುವ ಹಲವು ಪ್ರದರ್ಶನಗಳು ನೆರವೇರಿದವು.

ಸುಗಮ ಸಂಗೀತ: ಬಳ್ಳಾರಿ ತಾಲ್ಲೂಕಿನ ಡಿ. ಕಗ್ಗಲ್ ಗ್ರಾಮದ ಕು. ಪುಟ್ಟರಾಜು .ಕೆ ಅವರು ಗಾಯನದ ಮೂಲಕ ನೆರೆದಿದ್ದ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ಸಮೂಹ ನೃತ್ಯ: ಬಳ್ಳಾರಿಯ ಶಾರದ ನಾಟ್ಯ ಅಕಾಡೆಮಿ ‘ಕಲಾವೃಕ್ಷ' ತಂಡದ ಪ್ರದರ್ಶಿಸಿದ ಅತ್ಯಾಕರ್ಷಕ ಸಮೂಹ ನೃತ್ಯವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಜಾನಪದ ಗೀತೆಗಳು: ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮದ ಕು. ಮುದ್ದಮ್ಮ ಅವರು ತಮ್ಮ ಗಂಭೀರ ಧ್ವನಿಯಲ್ಲಿ ಜಾನಪದ ಸೊಗಡಿನ ಗೀತೆಗಳನ್ನು ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಕಂಸಾಳೆ: ಕುರುಗೋಡು ತಾಲ್ಲೂಕಿನ ಗುತ್ತಿಗನೂರು ಗ್ರಾಮದ ಶಿವಪ್ಪ .ಸಿ ಮತ್ತು ಸಂಗಡಿಗರು ಕಂಸಾಳೆ ಕಲೆಯ ರೋಮಾಂಚನಕಾರಿ ಪ್ರದರ್ಶನ ನೀಡಿದರು.

ವೀರಗಾಸೆ: ಸಂಡೂರು ತಾಲ್ಲೂಕಿನ ತಾರಾನಗರದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಂಗಡಿಗರು ವೀರಗಾಸೆಯ ಶೌರ್ಯಪೂರ್ಣ ಕುಣಿತದ ಮೂಲಕ ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿದರು.

ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಪೆÇ್ರೀತ್ಸಾಹಿಸುವ ಇಂತಹ ಕಾರ್ಯಕ್ರಮಗಳು ನಮ್ಮ ಜಾನಪದ ಹಾಗೂ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಪೂರಕವಾಗಿವೆ ಎಂದು ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾತಂಡಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.

ಟಿಇಹೆಚ್ಆರ್ಡಿ ಟ್ರಸ್ಟ್ ಹಾಗೂ ಬಿ.ಪಿ.ಎಸ್.ಸಿ. ಶಾಲಾ ಮತ್ತು ಕಾಲೇಜಿನ ಅಧ್ಯಕ್ಷ ಡಾ. ಎಸ್.ಜಿ.ವಿ.ಮಹಿಪಾಲ್, ನಿವೃತ್ತ ವರದಿಗಾರರು ಹಾಗೂ ತಬಲ ಕಲಾವಿದರಾದ ಅಹಿರಾಜ್.ಎಂ., ಹಿಂದೂಸ್ತಾನಿ ಗಾಯಕ ದೊಡ್ಡಬಸಪ್ಪ ಗವಾಯಿ, ಜಾನಪದ ಗಾಯಕ ಹುಲುಗಪ್ಪ ಎಸ್.ಎಂ., ನಿವೃತ್ತ ಪಿಎಸ್ಐ ಹುಸೇನ್ ಸಾಬ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande