
ಬೆಂಗಳೂರು, 23 ಜುಲೈ (ಹಿ.ಸ.):
ಆ್ಯಂಕರ್:ದೇಶದಲ್ಲಿ ನೀಟ್ ಪರೀಕ್ಷೆ ಮತ್ತು ಇತರೆ ಶಿಕ್ಷಣ ವ್ಯವಸ್ಥೆಯ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕಾಂಗ್ರೆಸ್ ಪಕ್ಷ ಹಾಗೂ ದೇಶದ್ರೋಹಿ ಶಕ್ತಿಗಳ ಕೈವಾಡವಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿಷಯವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಅಧಿಕಾರವಿಲ್ಲದೆ ಹತಾಶಗೊಂಡಿದ್ದು, ದೇಶದಲ್ಲಿ ಅರಾಜಕತೆ ಹಾಗೂ ದಂಗೆಯನ್ನು ಸೃಷ್ಟಿಸಲು ಪಾಕಿಸ್ತಾನದ ಬೆಂಬಲಿಗರೊಂದಿಗೆ ಸೇರಿ ಸಂಚು ರೂಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಗಳಲ್ಲಿ ನಿಜವಾದ ಮೆರಿಟ್ ಇರೋ ವಿದ್ಯಾರ್ಥಿಗಳಿಲ್ಲ, ಬದಲಿಗೆ ಫೇಲ್ ಆದವರು ಹಾಗೂ ಕಮ್ಯುನಿಸ್ಟ್ ಮನಸ್ಥಿತಿಯ ಗುಂಪುಗಳು ಸೇರಿಕೊಂಡು ವ್ಯವಸ್ಥೆಯನ್ನು ಹಾಳುಮಾಡುತ್ತಿವೆ ಎಂದರು. ಆರ್ಎಸ್ಎಸ್ ಕುರಿತಾದ ಕಾಂಗ್ರೆಸ್ ನಾಯಕರ ಆರೋಪಗಳನ್ನು ತಳ್ಳಿಹಾಕಿದ ಅವರು, ವಾಸ್ತವಿಕ ಇತಿಹಾಸವನ್ನು ಜನರ ಮುಂದಿಡಲಾಗುತ್ತಿದೆ ಹೊರತು ಕಬಳಿಕೆ ಮಾಡುತ್ತಿಲ್ಲ, ದೇಶದಲ್ಲಿ ವಿರೋಧ ಪಕ್ಷಗಳು ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿವೆ ಎಂದು ಯತ್ನಾಳ್ ತೀವ್ರವಾಗಿ ಕಿಡಿಕಾರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII