ಬೊಮ್ಮಸಂದ್ರ ಸಿಲಿಂಡರ್ ಸ್ಫೋಟ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಎಸಿಪಿ ಸತೀಶ್
ಬೆಂಗಳೂರು, 23 ಜುಲೈ (ಹಿ.ಸ.): ಆ್ಯಂಕರ್: ಬೆಂಗಳೂರಿನ ಆನೇಕಲ್ ಸಮೀಪದ ಬೊಮ್ಮಸಂದ್ರದ ಪಿಜಿಯಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡವರನ್ನು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಸತೀಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಸೌರವ್ ಚೌಧರಿ, ಹಬೀಬು
BOMMASANDRA-CYLINDER


ಬೆಂಗಳೂರು, 23 ಜುಲೈ (ಹಿ.ಸ.):

ಆ್ಯಂಕರ್:

ಬೆಂಗಳೂರಿನ ಆನೇಕಲ್ ಸಮೀಪದ ಬೊಮ್ಮಸಂದ್ರದ ಪಿಜಿಯಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡವರನ್ನು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಸತೀಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಸೌರವ್ ಚೌಧರಿ, ಹಬೀಬುಲ್ ರೆಹಮಾನ್, ಸುಬ್ರತ್ ಬೇರಾ, ದೇಬಶಿಶ್ ಮಲಿಕ್, ದೇಬಶಿಶ್ ಹಲ್ದಾರ್, ದೇವಶಂಕರ್ ದಾಸ್, ಶಾಂತನು ರಾಯ್ ಮತ್ತು ಅಲ್ಲಾವುದ್ದೀನ್ ಗಾಯಗೊಂಡ ಕಾರ್ಮಿಕರಾಗಿದ್ದಾರೆ. ಬೆಳಿಗ್ಗೆ 6:30ರ ಸುಮಾರಿಗೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೌರವ್ ಚೌಧರಿಗೆ ಶೇಕಡಾ 30ರಷ್ಟು ಹಾಗೂ ಉಳಿದ 7 ಮಂದಿಗೆ ಶೇಕಡಾ 50ರಷ್ಟು ಸುಟ್ಟ ಗಾಯಗಳಾಗಿವೆ.

ಸದ್ಯ ಎಲ್ಲಾ ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಬೆಸ್ಟ್ ಆಸ್ಪತ್ರೆಯ ವೈದ್ಯೆ ಪಲ್ಲವಿ ತಿಳಿಸಿದ್ದಾರೆ.

ಆದರೂ ಮುಂದಿನ 48 ಗಂಟೆಗಳವರೆಗೆ ಪರಿಸ್ಥಿತಿ ಹೇಗಿರುತ್ತದೆ ಎಂದು ನಿಖರವಾಗಿ ಹೇಳಲುಸಾಧ್ಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande