ಬಳ್ಳಾರಿ : ಕಾಂಗ್ರೆಸ್ಸಿಗರ ವರ್ತನೆ : ಬಿಜೆಪಿ ಆಕ್ರೋಶ
ಬಳ್ಳಾರಿ, 23 ಜುಲೈ (ಹಿ.ಸ.) ಆ್ಯಂಕರ್ : ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯನ್ನು ಮುತ್ತಿಗೆ ಹಾಕುತ್ತಿದ್ದ ಬಿಜೆಪಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿಗರು ಮೊಟ್ಟೆ ಎಸೆದು ಆತಂಕ ಮೂಡಿಸಿರುವುದು ಸೇರಿ ನೀಟ್ ವಿವಾದಲ್ಲಿ ಪ್ರತಿಭಟನಾಕಾರರು - ಕಾಂಗ್ರೆಸ್ಸಿಗರು ಪ್ರಧಾನಮಂತ್
ಬಳ್ಳಾರಿ : ಕಾಂಗ್ರೆಸ್ಸಿಗರ ವರ್ತನೆ : ಬಿಜೆಪಿ ಆಕ್ರೋಶ


ಬಳ್ಳಾರಿ : ಕಾಂಗ್ರೆಸ್ಸಿಗರ ವರ್ತನೆ : ಬಿಜೆಪಿ ಆಕ್ರೋಶ


ಬಳ್ಳಾರಿ : ಕಾಂಗ್ರೆಸ್ಸಿಗರ ವರ್ತನೆ : ಬಿಜೆಪಿ ಆಕ್ರೋಶ


ಬಳ್ಳಾರಿ : ಕಾಂಗ್ರೆಸ್ಸಿಗರ ವರ್ತನೆ : ಬಿಜೆಪಿ ಆಕ್ರೋಶ


ಬಳ್ಳಾರಿ, 23 ಜುಲೈ (ಹಿ.ಸ.)

ಆ್ಯಂಕರ್ : ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯನ್ನು ಮುತ್ತಿಗೆ ಹಾಕುತ್ತಿದ್ದ ಬಿಜೆಪಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಕಾಂಗ್ರೆಸ್ಸಿಗರು ಮೊಟ್ಟೆ ಎಸೆದು ಆತಂಕ ಮೂಡಿಸಿರುವುದು ಸೇರಿ ನೀಟ್ ವಿವಾದಲ್ಲಿ ಪ್ರತಿಭಟನಾಕಾರರು - ಕಾಂಗ್ರೆಸ್ಸಿಗರು ಪ್ರಧಾನಮಂತ್ರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದನ್ನು ಖಂಡಿಸಿ ಬಳ್ಳಾರಿ ಜಿಲ್ಲಾ ಬಿಜೆಪಿಯು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು, ಕಾಂಗ್ರೆಸ್ಸಿಗರು ನೀಟ್ ಪರೀಕ್ಷೆಯ ವಿಷಯದಲ್ಲಿ

ರಾಜಕಾರಣ ಮಾಡುತ್ತಿದೆ. ವಿಶ್ವಮಟ್ಟದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿರುವ ಭಾರತದ ಗೌರವವನ್ನು ವ್ಯವಸ್ಥಿತವಾಗಿ ಹಾಳು ಮಾಡುತ್ತಿದೆ. ತನ್ನ ರಾಜಕಾರಣಕ್ಕೆ ಯುವಶಕ್ತಿಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಟೀಕಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಬಿಜೆಪಿಯವರು ಮುತ್ತಿಗೆ ಹಾಕಿದಾಗ ಕೋಳಿ ತತ್ತಿಯನ್ನು ಎಸೆದು ಕಾಂಗ್ರೆಸ್ಸಿಗರು ಅಸಭ್ಯ ವರ್ತನೆಯನ್ನು ತೋರಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಆದರೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು, ಕಾಂಗ್ರೆಸ್ ದೇಶದಲ್ಲಿ ಸುಗಮ ಆಡಳಿತಕ್ಕೆ ಅವಕಾಶ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಅತ್ಯುತ್ತಮ ಆಡಳಿಕ್ಕೆ ಭ್ರಮನಿರಸಗೊಂಡಿರುವ ಕಾಂಗ್ರೆಸ್ ಪ್ರತಿಯೊಂದು ವಿಷವನ್ನೂ ವಿವಾದಗೊಳಿಸಿ - ರಾಜಕೀಯಗೊಳಿಸುತ್ತಿದೆ. ಕಾಂಗ್ರೆಸ್ ಹೀಗೇ ಮಾಡಿದಲ್ಲಿ ಅಧಿಕಾರದಿಂದ ಶಾಶ್ವತವಾಗಿ ದೂರವೇ ಉಳಿಯಲಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ಕುಮಾರ್ ಮೋಕ, ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಮಹೇಶ್ವರಸ್ವಾಮಿ, ಸುರೇಖಾ ಮಲ್ಲನಗೌಡ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande