
ಬೆಂಗಳೂರು, 23 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕನ್ನಡ ಮಕ್ಕಳ ಕೊರತೆ ಎದ್ದು ಕಾಣುತ್ತಿದ್ದು, ಈ ಬಗ್ಗೆ ಬಹುಭಾಷಾ ನಟ ಕಿಶೋರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುವಂತೆ ಮನವಿ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಕನ್ನಡದ ಮಕ್ಕಳು ಮತ್ತು ಯುವಕರ ಭಾಗವಹಿಸುವಿಕೆ ಕಡಿಮೆಯಿರುವುದನ್ನು ಗಮನಿಸಿರುವುದಾಗಿ ಕಿಶೋರ್ ತಿಳಿಸಿದ್ದಾರೆ.
ರಾಜಕೀಯ ಅಥವಾ ಧಾರ್ಮಿಕ ನಿಲುವುಗಳು ಏನೇ ಇರಲಿ, ದೇಶಪ್ರೇಮದ ವಿಚಾರ ಬಂದಾಗ ಯುವ ಜನತೆ ಮುಂದೆ ಬರಬೇಕು. ಪ್ರತಿಭಟನಾ ನಿರತರನ್ನು ದೇಶದ್ರೋಹಿಗಳು ಎಂದು ಕರೆಯುತ್ತಿದ್ದರೂ ಸಹ, ದೇಶದ ಭವಿಷ್ಯಕ್ಕಾಗಿ ಧರ್ಮದ ನಿಜವಾದ ಹಾದಿಯಲ್ಲಿ ಒಟ್ಟಾಗಿ ನಿಲ್ಲುವಂತೆ ಅವರು ಕರೆ ನೀಡಿದ್ದಾರೆ.
ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಸುಂದರ ನಾಳೆಯನ್ನು ಕಟ್ಟಲು ಎಲ್ಲರೂ ಒಂದಾಗಿ ಹೋರಾಟ ಮಾಡೋಣ ಎಂದು ನಟ ಕಿಶೋರ್ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII